

ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಲ್.ನಾಗೇಂದ್ರ ಗುರುವಾರ ಚಾಲನೆ ನೀಡಿದರು.
ಸಿಐಟಿಬಿ ಛತ್ರದ ಹಿಂಭಾಗದಲ್ಲಿ ವಾರ್ಡ್ ನಂ.1ರ ವ್ಯಾಪ್ತಿಯ ಶ್ರೀ ಲಕ್ಷ್ಮೀಕಾಂತ ವಿವಿಧೋದ್ದೇಶ ಸಹಕಾರ ಸಂಘದ ನಿವೇಶನದಲ್ಲಿ 5 ಲಕ್ಷ ರೂ. ಅನುದಾನದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.
ಪಾಲಿಕೆ ಸದಸ್ಯರಾದ ಲಕ್ಷ್ಮೀ ಶಿವಣ್ಣ, ನಮ್ರತಾ ರಮೇಶ್, ಚಿಕ್ಕವೆಂಕಟು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪುನೀತ್, ನಗರ ಯುವ ಮೋರ್ಚಾ ಅಧ್ಯಕ್ಷ ಕಿರಣ್‌ಗೌಡ, ಮಹಿಳಾ ಮೋರ್ಚಾ ಅಧ್ಯಕ್ಷೆ ತನುಜಾ ಮಹೇಶ್, ವಾರ್ಡ್ ಅಧ್ಯಕ್ಷ ಕಿರಣ್ ಸುಖಧಾರೆ, ಮುಖಂಡರಾದ ಜಯಪ್ಪ, ಶಿವು, ಭರತ್, ಮನು, ಗುರು, ಶರತ್, ಸೊಸೈಟಿ ಅಧ್ಯಕ್ಷ ಶ್ರೀಧರ್, ಗೀತಕ್ಕ, ಸೌಮ್ಯ, ಶುಭಂ ಇದ್ದರು.
ಛಾವಣಿ: ಬಳಿಕ ವಾರ್ಡ್ ನಂ.22 ರ ವ್ಯಾಪ್ತಿಯ ಹುಣಸೂರು-ಮೈಸೂರು ರಸ್ತೆಯ ಪಡುವಾರಹಳ್ಳಿ ಸಿಗ್ನಲ್ ಬಳಿಯಲ್ಲಿರುವ ಆದಿಚುಂಚನಗಿರಿ ಹಾಸ್ಟೆಲ್ ಕಾಂಪೌಂಡ್ ಪಕ್ಕದಲ್ಲಿ ಆಟೋ ನಿಲ್ದಾಣಕ್ಕೆ ಛಾವಣಿ ನಿರ್ಮಾಣ ( 5 ಲಕ್ಷ ರೂ.) ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ವಾರ್ಡ್ ಅಧ್ಯಕ್ಷ ಮಂಜು ಪಡುವಾರಹಳ್ಳಿ, ಮುಖಂಡರಾದ ಬಸವರಾಜು, ಸಂತೋಷ್, ಸಿ.ಡಿ.ಕುಮಾರ, ಸ್ವಾಮಿ, ವೇಣು, ಗೋಪಾಲ, ಕಾಂತ, ಮರಿಗೌಡ, ಕುಮಾರ, ಮಹದೇವು, ಚಂದ್ರ, ಛಾಯಾ, ಸುಧಾ ಇತರರಿದ್ದರು.