ಹಳಿಯಾಳದಲ್ಲಿ ದುರ್ಗಾದೌಡ್​ಗೆ ಚಾಲನೆ

HLY DURGA DOUD
Published on

ಹಳಿಯಾಳ: ಧರ್ಮ ರಕ್ಷಣೆ ಮತ್ತು ರಾಷ್ಟ್ರ ಪ್ರೇಮದ ಜಾಗರಣೆ ಸಲುವಾಗಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ 9 ದಿನಗಳ ಕಾಲ ಶಿವಪ್ರತಿಷ್ಠಾನ ಮತ್ತು ದುರ್ಗಾದೌಡ್ ಸಮಿತಿ ನೇತೃತ್ವದಲ್ಲಿ ಪಟ್ಟಣದ ಶ್ರೀ ಮಹಾಗಣಪತಿ ದೇವಸ್ಥಾನದ ಮುಂದೆ ದುರ್ಗಾದೌಡ್ ಧಾರ್ವಿುಕ ನಡಿಗೆಗೆ ಸೋಮವಾರ ಚಾಲನೆ ನೀಡಲಾಯಿತು.

13ನೇ ವರ್ಷಕ್ಕೆ ಪದಾರ್ಪಣೆ ಮಾಡಿರುವ ದುರ್ಗಾದೌಡ್​ಗೆ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಮಾಜಿ ಶಾಸಕ ಸುನೀಲ ಹೆಗಡೆ ಸೇರಿದಂತೆ ಸಮಿತಿ ಪದಾಧಿಕಾರಿಗಳು ಚಾಲನೆ ನೀಡಿದರು. ರಿತು ಧೂಳಿ, ಪೂಜಾ ಧೂಳಿ, ಸತ್ಯಜಿತ ಗಿರಿ, ಸಂತೋಷ ಘಟಕಾಂಬಳೆ, ಶ್ರೀನಿವಾಸ ಘೊಟ್ನೇಕರ ಇತರರಿದ್ದರು. ಹಳಿಯಾಳದ ಪೊಲೀಸ್ ಲೈನ್​ನಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ದುರ್ಗಾದೌಡ್ ತಲುಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net