ಮೈಸೂರಿನಲ್ಲಿ ಬೃಹತ್ ಗ್ರಾಹಕರ ಮೇಳಕ್ಕೆ ಚಾಲನೆ

44
Published on

ಮೈಸೂರು: ‘ಕರ್ನಾಟಕ ಸಂಭ್ರಮ- 50’ ಅಂಗವಾಗಿ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಆಯೋಜಿಸಿರುವ 30 ದಿನಗಳ ಬೃಹತ್ ಗ್ರಾಹಕರ ಮೇಳಕ್ಕೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯೂಬ್ ಖಾನ್ ಚಾಲನೆ ನೀಡಿದರು.
ನಗರದಲ್ಲಿ ಮೊದಲ ಬಾರಿಗೆ ಸೈಮನ್ ಎಕ್ಸಿಬಿಟರ್ಸ್ ದಸರಾ ವಸ್ತುಪ ್ರದರ್ಶನದಲ್ಲಿ ಬೃಹತ್ ಗ್ರಾಹಕ ಮೇಳ ಕರ್ನಾಟಕ ಸಂಭ್ರಮ 50 ಆಯೋಜಿಸಲಾಗಿದೆ. ಆಗಸ್ಟ್ 25ರವರೆಗೆ ನಡೆಯಲಿದ್ದು, ರಾಜ್ಯವನ್ನಾಳಿದ ಮುಖ್ಯಮಂತ್ರಿಗಳು, ಕನ್ನಡ ಚಿತ್ರರಂಗ ಗಣ್ಯರು, ಕ್ರೀಡಾಪಟುಗಳು, ಜ್ಞಾನಪೀಠ ಪ್ರಶಸಿ ್ತ ಪುರಸ್ಕೃತರು ಸೇರಿದಂತೆ ನಾಡಿನ ಹಲವು ಮಹನೀಯರ ಸಾಧನೆಗಳ ಮಾಹಿತಿಯನ್ನು ಕೂಡಾ ಇಲ್ಲಿ ಪ್ರದರ್ಶಿಸಲಾಗುತ್ತದೆ.
ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಸೈಮನ್ ಎಕ್ಸಿಬಿಟರ್ಸ್‌ ನಿರ್ದೆಶಕ ನಾಗಚಂದ್ರ, ಕುಂಬಾರ ಕೊಪ್ಪಲು ರವಿ, ಮಹೇಶ್ ಅರಸ್ ಇತರರು ಇದ್ದರು.
ಮೇಳದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳಿದ್ದು, ರೋಬೋಟಿಕ್ ಬಟರ್‌ಫ್ಲೈ, ಅನಿಮಲ್ ಕಿಂಗ್‌ಡಮ್, ಹಿಮಾಲಯನ್ ಅನಿಮಲ್ಸ್ ಮತ್ತು ಅವತಾರ್ ಎಂಬ ನಾಲ್ಕು ಪರಿಕಲ್ಪನೆಗಳನ್ನು ಹೊಂದಿದೆ. ಒಂದೇ ಸೂರಿನಡಿ ಹಲವು ಉತ್ಪನ್ನ; ಡ್ರೆಸ್ ಮೆಟೀರಿಯಲ್ಸ್, ರೆಡಿಮೇಡ್ ಉಡುಪು, ಸೀರೆ, ಕುರ್ತಾ ಪೈಜಾಮಾ, ಶಟಿರ್ಂಗ್ ಮತ್ತು ಸೂಟಿಂಗ್ ಗಮನ ಸೆಳೆಯಲಿವೆ.
ಮಸಾಲಾ ಪುಡಿಗಳು, ಜೇನುತುಪ್ಪ, ಚಾಕೊಲೇಟ್‌ಗಳು, ಚಟ್ನಿ ಪುಡಿ, ಉಪ್ಪಿನಕಾಯಿ, ಒಣ ಹಣ್ಣುಗಳು ಸಹ ಮಾರಾಟಕ್ಕೆ ಇರುತ್ತವೆ. ಸಣ್ಣ ಕಂಪನಿಗಳಿಂದ ಹಿಡಿದು ಬಹುರಾಷ್ಟ್ರೀಯ ಕಂಪನಿಗಳ ಉತ ್ಪನ್ನಗಳು ಒಂದೇ ಸೂರಿನಡಿ ಲಭ್ಯವಿರುತ್ತವೆ. ಅಲ್ಲದೆ ಮಕ್ಕಳು ಮತ್ತು ಹಿರಿಯರಿಗೆ ಮನರಂಜನಾ ಉದ್ಯಾನವನವು ಆಕರ್ಷಿಸಲಿದೆ. ಆಹಾರ ಪ್ರೇಮಿಗಳಿಗಾಗಿ ಫುಡ್ ಕೋರ್ಟ್ ಕೂಡಾ ಸ್ಥಾಪಿಸಲಾಗಿದೆ. ಪ್ರೇಕ್ಷಕರ ಮನರಂಜಿಸಲು ಪ್ರತಿದಿನ 4ರಿಂದ 9.30ರ ವರೆಗೆ ವೇದಿಕೆ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net