

ಕಂಪಲಾಪುರ : ಸೋಮವಾರ 2023-24 ನೇ ಸಾಲಿನ ತಂಬಾಕು ಹರಾಜು ಪ್ರಕ್ರಿಯೆ ಆರಂಭವಾಯಿತು. ಮಾರುಕಟ್ಟೆಗೆ ಒಟ್ಟು 18 ಬೇಲುಗಳು ಬಂದಿದ್ದವು. ಬೆಳಗ್ಗೆ ಪೂಜೆ ನೆರವೇರಿಸಿ ನಂತರ ಹರಾಜಿಗೆ ಚಾಲನೆ ನೀಡಲಾಯಿತು. ಎಲ್ಲ ತಂಬಾಕು ಉತ್ತಮ ದರ್ಜೆಯದಾದ್ದರಿಂದ ಪ್ರತಿ ಕೆಜಿ ಗೆ 290 ರೂ. ದೊರೆಯಿತು. ಐಟಿಸಿ, ಜಿಪಿಐ, ಎಒ, ವೃಷಭ ಸೇರಿದಂತೆ ಹಲವು ಕಂಪನಿಗಳು ಹರಾಜಿನಲ್ಲಿ ಭಾಗವಹಿದ್ದವು.
ಪ್ರಾದೇಶಿಕ ವ್ಯವಸ್ಥಾಪಕ ಲಕ್ಷ್ಮಣ್ ರಾವ್, ಹರಾಜು ಅೀಕ್ಷಕ ಸಿದ್ದರಾಮ್ ಡಾಂಘೆ , ಕ್ಷೇತ್ರಾಕಾರಿ ಸಂದೀಪ್ , ರೂಪಾ, ಲಿಂಗರಾಜು, ಚಿಲ್ಕುಂದ ಪಿಎಸಿಎಸ್ ಅಧ್ಯಕ್ಷ ಪ್ರೇಂಕುಮಾರ್, ಗ್ರಾಪಂ ಅಧ್ಯಕ್ಷ ಸತೀಶ್, ಸದಸ್ಯ ಜಯಣ್ಣ , ಪಿ.ಪಟ್ಟಣ ತಾ.ರೈತ ಮೋರ್ಚಾ ಅಧ್ಯಕ್ಷ ನಿತ್ಯಾನಂದ, ರೈತ ಮುಖಂಡ ಕಲ್ಲಳ್ಳಿ ಶಿವಣ್ಣ, ವಿಷಕಂಠಪ್ಪ, ಸಣ್ಣತಮ್ಮೇಗೌಡ, ಪ್ರಭಾಕರ ಆರಾಧ್ಯ , ಹಿಟ್ಗಳ್ಳಿ ರವಿ, ಬೋರೆಹೊಸಳ್ಳಿ ಸ್ವಾಮಿ, ಹರವೆ ಶ್ರೀಧರ್, ಕರ್ಣಕುಪ್ಪೆ ರಾಜಣ್ಣ , ಬೊಮ್ಮೇಗೌಡ, ಬೇಲಾಳು ಶಿವಣ್ಣ, ಚಿಲ್ಕುಂದ, ಮಂಜು, ವೇಣು, ನಾಗಮಂಗಲ ರವಿ ಸೇರಿದಂತೆ ರೈತರು ಹಾಜರಿದ್ದರು.
ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಈ ಬಾರಿ ಉತ್ತಮವಾಗಿ ಮಳೆಯಾಗಿದ್ದು, ಆದಷ್ಟು ರೈತರು ಹೆಚ್ಚು ತಂಬಾಕು ಬೆಳೆದಿದ್ದಾರೆ, ಕಳೆದ ಬಾರಿ ಪ್ರತಿ ಕೆಜಿಗೆ ಸರಾಸರಿ ಬೆಲೆ 270 ರೂ. ಸಿಕ್ಕಿತ್ತು , ಆಂಧ್ರ ಪ್ರದೇಶದ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ತಂಬಾಕಿಗೆ 411 ರೂ. ದೊರೆತಿದೆ. ಆದರೆ ಕರ್ನಾಟಕದ ತಂಬಾಕು ವಿಶ್ವದಲ್ಲೇ ಪ್ರಸಿದ್ಧಿ ಪಡೆದಿರುವುದರಿಂದ ಎಲ್ಲ ರೈತರಿಗೂ ಪ್ರತಿ ಕೆಜಿ ಗೆ 300 ರೂ ದೊರಕಲಿ ಎಂದು ತಿಳಿಸಿದರು.