

ರೋಣ: ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಉದ್ಯೋಗ ಖಾತರಿ ಯೋಜನೆಯ ಪ್ರಚಾರ ರಥಕ್ಕೆ ಚಾಲನೆ ನೀಡಲಾಯಿತು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರವಿ.ಎ.ಎನ್. ಮಾತನಾಡಿ, ಭೂ ಅಭಿವದ್ಧಿ, ಕೃಷಿ ಹೊಂಡ, ಅಲ್ಪ ಆಳದ ಬಾವಿ, ಎರೆಹುಳು ಗೊಬ್ಬರ ಗುಂಡಿ, ತೋಟಗಾರಿಕೆ, ಆಟದ ಮೈದಾನ, ಕಣ, ಹೊಲಗಳಿಗೆ ಹೋಗುವ ದಾರಿ, ಸ್ಮಶಾನ ಅಭಿವೃದ್ಧಿ, ಗ್ರಾಮೀಣ ಗೋದಾಮುಗಳು, ಗ್ರಾಮದ ಪರಿಮಿತಿಯಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ, ದನದ ಕೊಟ್ಟಿಗೆ ನಿರ್ಮಾಣಗಳನ್ನು ಈ ಬಾರಿ ಕೈಗೊಳ್ಳಲಾಗಿದೆ.ಪ್ರಚಾರ ವಾಹಿನಿಯಲ್ಲಿ ಇವುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿದರು. ಬಸವರಾಜ ಅಂಗಡಿ, ಯಸೂಫ್ ಇಟಗಿ, ಶಿಪುತ್ರಪ್ಪ ದೊಡ್ಡಮನಿ, ಜಗದೀಶ ಮಡಿವಾಳರ, ನಿಂಗಪ ಮೇಟಿ, ಶಿವಯೋಗಪ ರಿತ್ತಿ, ಶಿವರಾಜ ಮುಗಳಿ, ಇತರರಿದ್ದರು.