

ಕಟಕೊಳ: ತೋರಣಗಟ್ಟಿ ಕ್ರಾಸ್‌ನಿಂದ ರಾಮದುರ್ಗ ತಾಲೂಕಿನ ಹದ್ದಿನವರೆಗೆ 6.40 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಅಶೋಕ ಪಟ್ಟಣ ಭಾನುವಾರ ಚಾಲನೆ ನೀಡಿದರು.
ತೋರಣಗಟ್ಟಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಮುದಗೊಂಡ, ಗ್ರಾಪಂ ಉಪಾಧ್ಯಕ್ಷ ವಿಠ್ಠಲ ಜೋಗಿ, ಭೂನ್ಯಾಯ ಮಂಡಳಿ ಸದಸ್ಯ ಎಸ್.ಎನ್. ಸಿಂಗಾರಗೊಪ್ಪ, ಜಗದೀಶ ಬಿಜಲಿ, ರಾಮಣ್ಣ ಮೆಟಗುಡ್ಡ, ಸೋಮನಗೌಡ ಮಲಗೌಡರ, ತಮ್ಮೇಶ ಐನಾಪುರ, ಸುಪ್ರೀತ ಪಾಟೀಲ, ಮಲ್ಲನಗೌಡ ಸುರಗ, ಮಲ್ಲಿಕಾರ್ಜುನ ಐನಾಪುರ, ಹೂವಪ್ಪ ಕರ್ಲನವರ, ಬಸವರಾಜ ಐನಾಪುರ ಇತರರಿದ್ದರು