

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೃಷಿ ಇಲಾಖೆ, ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ಪದವೀಧರ ಅಧಿಕಾರಿಗಳ ಸಂದ ಆಶ್ರಯದಲ್ಲಿ ರೈತರು ಹಾಗೂ ಗ್ರಾಹಕರ ನಡುವಿನ ಸಂಚಾರಿ ನೇರ ಮಾರುಕಟ್ಟೆ ವ್ಯವಸ್ಥೆಯನ್ನು ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ಮಂಗಳವಾರ ಉದ್ಘಾಟಿಸಲಾಯಿತು.
ಕಲಟಗಿ ತಾಲೂಕಿನ ಗುಡ್ಡದ ಹುಲಿಕಟ್ಟಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ಕೃಷಿ ಹಾಗೂ ಸಂಸ್ಕರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವ ವಾಹನಕ್ಕೆ ಜಂಟಿ ಕೃಷಿ ನಿರ್ದೇಶಕ ಡಾ. ಎಂ. ಕಿರಣಕುಮಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ರೈತರು ಶ್ರಮವಹಿಸಿ ಬೆಳೆಯುವ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರೆಯಲು ನೇರ ಮಾರುಕಟ್ಟೆ ವ್ಯವಸ್ಥೆ ರೂಢಿಸಿಕೊಳ್ಳಬೇಕು. ಇದರಿಂದ ಗ್ರಾಹಕರಿಗೂ ಸುರತ ಮತ್ತು ಆರೋಗ್ಯಯುಕ್ತ ಆಹಾರೋತ್ಪನ್ನಗಳು ನ್ಯಾಯಯುತ ಬೆಲೆಯಲ್ಲಿ ಸಿಗುತ್ತವೆ. ಇಂತಹ ವ್ಯವಸ್ಥೆಯಲ್ಲಿ ಪರಸ್ಪರ ವಿಶ್ವಾಸಾರ್ಹತೆಯಿಂದ ನಡೆದುಕೊಳ್ಳುವುದು ಎಲ್ಲ ಪಾಲುದಾರರ ಜಾವಾಬ್ದಾರಿ ಎಂದರು.
ಸಾವಯವ ರೈತರ ಸಮೂಹ ರಚಿಸಿಕೊಂಡಿರುವ ಎಂ.ವಿ.ಪಾಟೀಲರು ತಮ್ಮ ಉತ್ಪನ್ನಗಳು ಅಪ್ಪಟ ಸಾವಯವ ಪದ್ಧತಿಯಲ್ಲಿ ಬೆಳೆದಿದ್ದು, ಮಾರುಕಟ್ಟೆಗಿಂತ ಕಮ್ಮಿ ಬೆಲೆಯಲ್ಲಿ ನೀಡಲಿದ್ದಾರೆ. ಪ್ರತಿ ಮಂಗಳವಾರ ಧಾರವಾಡದ ಕೃಷಿ ವಿಶ್ವ ವಿದ್ಯಾಲಯ ಆವರಣದಲ್ಲಿ ಬೆಳಗ್ಗೆ 10.30ರಿಂದ ಮತ್ತು ಮಧ್ಯಾಹ್ನ 2.30ರಿಂದ ಕೃಷಿ ಇಲಾಖೆಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು ಎಂದರು.
ಕೃಷಿ ತಂತ್ರರ ಸಂಸ್ಥೆ ಕಾರ್ಯದಶಿರ್ ಡಾ.ಎಸ್.ಎಸ್. ಡೊಳ್ಳಿ, ಸಾವಯವ ಕೃಷಿ ತ ಡಾ. ಎಚ್.ಬಿ. ಬಬಲಾದ, ಉಪ ಕೃಷಿ ನಿರ್ದೇಶಕಿ ಜಯಶ್ರೀ ಹಿರೇಮಠ, ಸ್ಮಿತಾ ಆರ್, ಸಹಾಯಕ ಕೃಷಿ ನಿರ್ದೇಶಕರಾದ ಚನ್ನಪ್ಪ ಅಂಗಡಿ, ಆಶಾ ಮಿಕಲಿ, ಗೀತಾ ಕಡಪಟ್ಟಿ, ಗೀತಾ ಎಲ್, ಕೃಷಿ ಪದವೀಧರ ಅಧಿಕಾರಿಗಳ ಸಂದ ಅಧ್ಯ ವಿ.ವಿ.ವಿಠ್ಠಲರಾವ್, ಇತರರು ಇದ್ದರು.
ಬಳಿಕ ಎಂ.ಡಿ.ಪಾಟೀಲ, ಡಾ. ಬಿ.ಎನ್.ಮೊಟಗಿ, ಜಿ.ಎಂ.ಹೊಸಮನಿ, ಶಿವರಾಜ ಹುನಗುಂದ, ಹಿರಿಯ&ಕಿರಿಯ ಅಧಿಕಾರಿಗಳು, ಸಿಬ್ಬಂದಿ ಸಾವಯವ ಉತ್ಪನ್ನಗಳನ್ನು ಖರೀದಿಸಿದರು.