

ಬೆಂಗಳೂರು: ಫೋಕ್ಸ್ ವ್ಯಾಗನ್ ಸಹಯೋಗದಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 247 ಸುದ್ದಿ ವಾಹಿನಿ ಜಯನಗರದ 4ನೇ ಬ್ಲಾಕ್ನಲ್ಲಿರುವ ಎಂಇಎಸ್ ಮೈದಾನದಲ್ಲಿ ಆಯೋಜಿಸಿರುವ 3 ದಿನಗಳ ‘ಮೋಟೋ ಫೆಸ್ಟ್’ಗೆ ಶುಕ್ರವಾರ ಚಾಲನೆ ದೊರೆಯಿತು. ಮೊದಲ ದಿನವೇ ಉತ್ತಮ ಸ್ಪಂದನೆ ದೊರೆತಿದೆ.
ಚಿತ್ರನಟ ಡಾಲಿ ಧನಂಜಯ್ ಮತ್ತು ನಟಿ ಅಮೃತಾ ಅಯ್ಯಂಗಾರ್, ವಿಆರ್ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ್ ಸಂಕೇಶ್ವರ, ಜಯನಗರ ಶಾಸಕಿ ಸೌಮ್ಯಾರೆಡ್ಡಿ ಚಾಲನೆ ನೀಡಿದರು. ಸ್ಥಳೀಯ ಪಾಲಿಕೆ ಸದಸ್ಯೆ ನಾಗರತ್ನಾ ರಾಮಮೂರ್ತಿ, ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ ಉಪಸ್ಥಿತರಿದ್ದರು. ನಟ- ನಟಿಯರಿಬ್ಬರೂ ಫೆಸ್ಟ್ನಲ್ಲಿ ಒಂದು ಸುತ್ತು ಹಾಕಿ ತಮಗಿಷ್ಟವಾದ ಕಾರಿನ ಬಗ್ಗೆ ಕಂಪನಿಯ ಪ್ರತಿನಿಧಿಗಳ ಮೂಲಕ ಮಾಹಿತಿ ಪಡೆದುಕೊಂಡರು.
ನಟ ಡಾಲಿ ಧನಂಜಯ್ ಮಾತನಾಡಿ, ಮೊದಲ ಬಾರಿಗೆ ಈ ರೀತಿಯ ಮೋಟೋ ಫೆಸ್ಟ್ನಲ್ಲಿ ಭಾಗವಹಿಸುತ್ತಿದ್ದೇನೆ. ನನಗೆ ಬೈಕ್ ಮತ್ತು ಕಾರುಗಳ ಮೇಲೆ ಕ್ರೇಜ್ ಇದೆ. ಬಹುತೇಕರಿಗೆ ಬೈಕ್ ಮತ್ತು ಕಾರು ಖರೀದಿಸುವ ಬಯಕೆ ಇರುತ್ತದೆ. ಅಂತಹವರಿಗೆ ಸೂಕ್ತ ಮಾರ್ಗದರ್ಶನ ಮತ್ತು ರಿಯಾಯಿತಿ ದೊರೆಯುವುದರಿಂದ ಫೆಸ್ಟ್ನಲ್ಲಿ ಭಾಗವಹಿಸುವುದು ಸೂಕ್ತ. ಇಲ್ಲಿ ಪ್ರಮುಖ ಕಂಪನಿಯ ವಾಹನಗಳು ಲಭ್ಯವಿರುವುದರಿಂದ ಒಂದೇ ವೇದಿಕೆಯಲ್ಲಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು. ಅಲ್ಲದೆ, ಬೇರೆ ವಾಹನಗಳ ಜತೆಗೆ ತುಲನೆ ಮಾಡಬಹುದಾಗಿದೆ. ವಿಜಯವಾಣಿ ಮತ್ತು ದಿಗ್ವಿಜಯ ಒಂದು ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದರು.
ಶಾಸಕಿ ಸೌಮ್ಯಾರೆಡ್ಡಿ ಮಾತನಾಡಿ, ಪರಿಸರದ ಕಾಳಜಿ ವಹಿಸಿ ಮೊದಲು ಎಲೆಕ್ಟ್ರಿಕ್ ಕಾರು ಖರೀದಿಸಿದ್ದೆ. ಇಂದಿಗೂ ಅದು ನನ್ನ ಬಳಿ ಇದೆ. ವಾಹನ ಖರೀದಿ ಮಾಡುವ ಯೋಜನೆ ಇರುವವರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ. ಇಲ್ಲೇ ಬ್ಯಾಂಕ್ ಸಹ ತನ್ನ ಕೌಂಟರ್ ತೆರೆದಿರುವುದರಿಂದ ಸುಲಭವಾಗಿ ಸಾಲ ದೊರೆಯಲಿದೆ. ಗ್ರಾಹಕರು ಕಾರನ್ನು ನೋಡಿ ಇಲ್ಲೇ ಬುಕ್ ಮಾಡುವುದರಿಂದ ಆಕರ್ಷಕ ಕೊಡುಗೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಸದ್ಯ ನನ್ನ ಬಳಿ ಯಾವುದೇ ಕಾರಿಲ್ಲ. ಶೀಘ್ರದಲ್ಲೇ ಖರೀದಿಸುವ ಯೋಚನೆ ಇದೆ. ನನಗೆ ಸ್ವಿಫ್ಟ್ ತುಂಬಾ ಇಷ್ಟ. ಇದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಸದ್ಯವೇ ಬುಕ್ ಮಾಡುತ್ತೇನೆ. | ಅಮೃತ ಅಯ್ಯಂಗಾರ್ ನಟಿ
ಪ್ರೀ ಓನ್ಡ್ ಐಷಾರಾಮಿ ಕಾರುಗಳು ಲಭ್ಯ
ಹೊಸ ಲಕ್ಸುರಿ ಕಾರುಗಳನ್ನು ಖರೀದಿಸಲು ಹೋದರೆ 70ರಿಂದ 80 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಆದರೆ, ಫೆಸ್ಟ್ನಲ್ಲಿ ಪ್ರೀ ಓನ್ಡ್ ಐಷಾರಾಮಿ ಕಾರುಗಳನ್ನೂ ಪ್ರದರ್ಶನಕ್ಕೆ ಇಡಲಾಗಿದೆ. 35 ಲಕ್ಷ ರೂ. ನಿಂದ 40 ಲಕ್ಷ ರೂ.ವರೆಗೆ ಲಭ್ಯವಿವೆ. ಪ್ರದರ್ಶನಕ್ಕಿಟ್ಟ ಕಾರುಗಳನ್ನು ಬಿಟ್ಟು ಮುಂದಕ್ಕೆ ಹೋಗಲಾರದಷ್ಟು ಗ್ರಾಹಕರನ್ನು ಹಿಡಿದು ನಿಲ್ಲಿಸುತ್ತಿದ್ದವು. ಕೆಲವರು ಎಲ್ಲ ಮಾಹಿತಿ ಪಡೆದು ಖರೀದಿಗೆ ಮುಂದಾದರು.
ಭಾಗಿಯಾಗಿರುವ ಕಂಪನಿಗಳು
ಫೆಸ್ಟ್ಗೆ ಆಗಮಿಸುವ ಗ್ರಾಹಕರಿಗೆ ಹೊಸ ತಂತ್ರಜ್ಞಾನ, ಮತ್ತು ವಿನ್ಯಾಸ ಹೊಂದಿರುವ ಕಾರುಗಳನ್ನು ಹಲವು ಕಂಪನಿಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿವೆ. ಫೋಕ್ಸ್ವ್ಯಾಗನ್, ಹೋಂಡಾ ಮೋಟರ್ಸ್ ಆಂಡ್ ಸ್ಕೂಟರ್ಸ್ ಲಿ., ನಿಸಾನ್ ಕಾರ್ಸ್, ದಕ್ಷಿಣ್ ಹೋಂಡಾ ಕಾರ್ಸ್, ಮಾರುತಿ ಸುಜುಕಿ ಅರೇನಾ, ಟಿವಿಎಸ್ ಸುಂದರಂ ಮೋಟಾರ್ಸ್ (ಮರ್ಸಿಡಿಸ್ ಬೆಂಜ್) ಕಂಪನಿಗಳ ಕಾರುಗಳು ಫೆಸ್ಟ್ನ ಆಕರ್ಷಣೆಯಾಗಿವೆ. ಜೆ.ಕೆ. ಟೈಯರ್ಸ್, ರೆಡ್ ಸೋಲ್ ಕಾರ್ ಆಕ್ಸೆಸರೀಸ್ ಮತ್ತು ಬ್ಯಾಂಕ್ ಪಾಟರ್°ರ್ ಆಗಿ ಕೆನರಾ ಬ್ಯಾಂಕ್ ಭಾಗವಹಿಸಿದೆ. ಮಾಹಿತಿಗೆ ಮೊ: 8884432339 ಸಂರ್ಪಸಿ
ಕಾರುಗಳ ತಾಂತ್ರಿಕ ನೈಪುಣ್ಯತೆ, ವಿಶೇಷ ವಿನ್ಯಾಸದ, ಹೊಂದಿರುವ ಸೌಲಭ್ಯಗಳ ಬಗ್ಗೆ ಮೊಟೋ ಫೆಸ್ಟ್ನಲ್ಲಿ ಸಂಪೂರ್ಣ ಮಾಹಿತಿ ಲಭ್ಯವಾಯಿತು. ಕಾರು ಖರೀದಿ ಮಾಡಲು ಹಲವು ಅಂತರ್ಜಾಲ ಹುಡುಕಾಡಿದರೂ, ಪೂರ್ಣ ಮಾಹಿತಿ ಸಿಕ್ಕಿರಲಿಲ್ಲ. ಇಲ್ಲಿ ಸಂಪೂರ್ಣ ಮಾಹಿತಿ ನೀಡುವ ಜತೆಗೆ ನೈಜವಾಗಿ ಕಾರುಗಳ ಅನುಭವ ಪಡೆಯಲು ಅವಕಾಶ ಮಾಡಿಕೊಟ್ಟರು. | ಎಸ್. ಧನಂಜಯ್ ಬೆಂಗಳೂರಿನಲ್ಲಿ ಬಿಎಸ್-6 ಕಾರುಗಳು ಮಾರುಕಟ್ಟೆಗೆ ಬಂದ ನಂತರ ನಾನು ನೋಡುತ್ತಿರುವ ಮೊದಲ ಮೊಟೋ ಫೆಸ್ಟ್ ಇದಾಗಿದೆ. ನಾನು ಒಂದು ಕಾರು ಖರೀದಿ ಮಾಡಲು ಆಗಮಿಸಿದ್ದಕ್ಕಿಂತ ಹಲವು ಕಾರುಗಳು ಹೊಸ ವಿನ್ಯಾಸ ಹೊಂದಿವೆ. ಆಯ್ಕೆಗೆ ಹಲವು ಅವಕಾಶವಿದ್ದು, ನನಗೆ ಹೊಂದಿಕೆಯಾಗುವುದನ್ನು ಖರೀದಿ ಮಾಡುತ್ತೇನೆ. | ಚಂದನ್ ನಾನು ಸ್ಕೂಟರ್ ಖರೀದಿಸಲು ಉದ್ದೇಶಿಸಿದ್ದು, ಫೆಸ್ಟ್ಗೆ ಬಂದಿದ್ದೇನೆ. ಹಲವು ಸ್ಕೂಟರ್ ಮತ್ತು ಬೈಕ್ಗಳ ಮಾಹಿತಿ ಪಡೆದುಕೊಂಡಿದ್ದೇನೆ. ಪಾಲಕರೊಂದಿಗೆ ಬಂದು ಖರೀದಿ ಮಾಡುತ್ತೇನೆ. | ನಯನಾ
ಇನ್ನೂ 2 ದಿನ ಮೊಟೋ ಫೆಸ್ಟ್
ಮೋಟೋ ಫೆಸ್ಟ್ ಶನಿವಾರ ಮತ್ತು ಭಾನುವಾರವೂ ಮುಂದುವರಿಯಲಿದೆ. ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಫೆಸ್ಟ್ ಗ್ರಾಹಕರಿಗೆ ಮುಕ್ತವಾಗಿದ್ದು, ಪ್ರವೇಶ ಉಚಿತವಾಗಿದೆ. ಗ್ರಾಹಕರು ತಮ್ಮ ಅಭಿರುಚಿಗೆ ತಕ್ಕ ವಾಹನಗಳ ಬಗ್ಗೆ ಮಾಹಿತಿ ಹಾಗೂ ಖರೀದಿಗೆ ಅವಕಾಶವಿದೆ. ಹೊಸ ಮಾದರಿ ವಿಭಿನ್ನ ಶೈಲಿಯ ಕಾರುಗಳು, ಬಿಎಸ್-6 ಸೌಲಭ್ಯ ಹೊಂದಿರುವ 2020ನೇ ವರ್ಷದ ಉತ್ಪಾದನೆ ಕಾರುಗಳು, ಹೊಸ ವಿನ್ಯಾಸ ಮತ್ತು ವಿಭಿನ್ನ ಅನುಭವ ನೀಡುವ ಕಾರುಗಳು ಆಕರ್ಷಣೀಯವಾಗಿದ್ದವು. ಮಧ್ಯಾಹ್ನ 12.30ಕ್ಕೆ ಉದ್ಘಾಟನೆಗೂ ಮುಂಚಿತವಾಗಿ ಆಗಮಿಸಿದ ಸಾರ್ವಜನಿಕರು ವಾಹನಗಳ ಬಗ್ಗೆ ಮಾಹಿತಿ ಪಡೆದುಕೊಂಡು ಕೆಲವರು ಸ್ಥಳದಲ್ಲಿಯೇ ಕಾರು ಖರೀದಿಗೆ ಬುಕ್ ಮಾಡಿದರು. ಗ್ರಾಹಕರ ಅಭಿರುಚಿಗೆ ಪೂರಕವಾಗಿ ವಿವಿಧ ಕಂಪನಿ ವಾಹನಗಳನ್ನು ಒಂದೇ ವೇದಿಕೆಯಲ್ಲಿ ತಂದು ಪ್ರದರ್ಶನಕ್ಕೆ ಇಡಲಾಗಿದೆ. ಆ ಮೂಲಕ ಒಂದು ವೇದಿಕೆಯಲ್ಲಿ ವಿವಿಧ ವಾಹನಗಳ ಮಾಹಿತಿ ಹಾಗೂ ಖರೀದಿಗೆ ಅವಕಾಶ ಮೋಟೋಫೆಸ್ಟ್ನಲ್ಲಿದೆ.
ಫೋಕ್ಸ್ ವ್ಯಾಗನ್ ಭರ್ಜರಿ ರಿಯಾಯಿತಿ
ಮೋಟೋಫೆಸ್ಟ್ನಲ್ಲಿ ಫೋಕ್ಸ್ ವ್ಯಾಗನ್ ತನ್ನ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿದೆ. ಇದರ ಲಾಭ ಪಡೆಯಬೇಕಾದರೆ ನೀವು ‘ಮೋಟೋ ಫೆಸ್ಟ್’ಗೆ ಆಗಮಿಸಬೇಕು. ಆಪಲ್ ಆಟೋ ಪ್ರೖೆ.ಲಿ. ಫೆಸ್ಟ್ನಲ್ಲಿ ‘ವೆಂಟೋ’ ‘ಪೋಲೋ’ ‘ಆಮಿಯೋ’ ಮಾಡೆಲ್ಗಳ ಮೇಲೆ ರಿಯಾಯಿತಿ ಘೋಷಣೆ ಮಾಡಿದೆ. ವೆಂಟೋ ಡೀಸೆಲ್ ಕಾರಿನ ಬೆಲೆ ಪ್ರಸ್ತುತ 16.63 ಲಕ್ಷ ರೂ. ಇದ್ದು, ಇದನ್ನು 15.90 ಲಕ್ಷ ರೂ.ಗಳಿಗೆ ನೀಡುತ್ತಿದೆ. ಆಮಿಯೋ 11.35 ಲಕ್ಷ ರೂ.ಗಳಿದ್ದು, 9.85 ಲಕ್ಷ ರೂ.ಗೆ ನೀಡಲಾಗುತ್ತಿದೆ. ಪೋಲೋ ಪೆಟ್ರೋಲ್ ಕಾರಿನ ಬೆಲೆ 9.45 ಲಕ್ಷ ರೂ. ಇದ್ದು, 8.30 ಲಕ್ಷ ರೂ.ಗಳಿಗೆ ಲಭ್ಯವಿದೆ. ಫೆಸ್ಟ್ಗೆ ಭೇಟಿ ನೀಡಿ ಈ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಗ್ರಾಹಕರಿಗೆ ಲಕ್ಷಾಂತರ ರೂ. ಲಾಭವಾಗಲಿದೆ ಎಂದು ಆಪಲ್ ಆಟೋ ಪ್ರೖೆ.ಲಿ.ನ ಸೇಲ್ಸ್ ಮ್ಯಾನೇಜರ್ ಜಿ. ಆಂಥೋಣಿ ಕ್ರೂಜ್ ಹೇಳಿದ್ದಾರೆ.