

ಭಟ್ಕಳ: ಇಲ್ಲಿನ ಆಟೋ ನಿಲ್ದಾಣವನ್ನು ಅಧಿಕೃತ ಮಾಡಬೇಕು. ಜತೆಗೆ ಇಲ್ಲಿ ಸ್ಥಳದ ಅವಕಾಶ ಕಡಿಮೆ ಇರುವುದರಿಂದ ಇನ್ಮುಂದೆ ಹೊಸ ಆಟೋಗೆ ಪರ್ವಿುಟ್ ಕೊಡುವುದನ್ನು ಸ್ಥಗಿತಗೊಳಿಸಬೇಕು ಎಂದು ಆಟೋ ರಿಕ್ಷಾ ಚಾಲಕರ ಸಂಘ ಭಟ್ಕಳದಿಂದ ಹೊನ್ನಾವರದ ಎಆರ್ಟಿಒಗೆ ಮಂಗಳವಾರ ಮನವಿ ಸಲ್ಲಿಸಿದರು.
ಭಟ್ಕಳದಲ್ಲಿ 1500 ಆಟೋ ರಿಕ್ಷಾಗಳಿದ್ದು, ಪಟ್ಟಣದಲ್ಲಿ ವಿವಿಧ ಕಡೆಗಳಲ್ಲಿ 32ಕ್ಕೂ ಹೆಚ್ಚು ಆಟೋ ನಿಲ್ದಾಣಗಳಿವೆ. ಆಟೋ ನಿಲ್ದಾಣಗಳನ್ನು ಒಮ್ಮೆ ಪರಿಶೀಲಿಸಿ ಅಧಿಕೃತಗೊಳಿಸಿದರೆ ನಮಗೆ ಅನುಕೂಲವಾಗಲಿದೆ. ಅದರಂತೆ ಭಟ್ಕಳ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಆಟೋಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಟೋ ನಿಲ್ಲಿಸಲು ಸ್ಥಳವಕಾಶದ ಕೊರತೆ ಇದೆ. ಹೀಗಾಗಿ ಹೊಸ ಆಟೋಗೆ ಪರ್ವಿುಟ್ ಕೊಟ್ಟರೆ ತೊಂದರೆ ಆಗಲಿದೆ. ಈಗಾಗಲೇ ಬಾಡಿಗೆ ಇಲ್ಲದೇ ಆಟೋ ಚಾಲಕರು ಕಂಗಾಲಾಗಿದ್ದಾರೆ. ಹೆಚ್ಚಿನ ಆಟೋ ಚಾಲಕರು ಆಟೋ ಬಾಡಿಗೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೊಸ ಆಟೋಗೆ ಪರ್ವಿುಟ್ ನೀಡಿದರೆ ಈಗಿರುವ ಆಟೋ ಚಾಲಕರಿಗೆ ತೊಂದರೆ ಆಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಇದೇ ವೇಳೆ ಹೊನ್ನಾವರದ ರಾಷ್ಟಿ›ೕಯ ಹೆದ್ದಾರಿ ಪ್ರಾಧಿಕಾರ ಮತ್ತು ಐಆರ್ಬಿ ಅಧಿಕಾರಿಗಳಿಗೂ ಮನವಿ ಸಲ್ಲಿಸಿ, ಭಟ್ಕಳದ ರಾಷ್ಟಿ›ೕಯ ಹೆದ್ದಾರಿ ಸನಿಹದಲ್ಲಿ ಆಟೋ ರಿಕ್ಷಾ ನಿಲ್ಲಿಸುವ ಸ್ಥಳ ಇದ್ದು, ಇದನ್ನು ಅಧಿಕೃತಗೊಳಿಸಿ ಆಟೋ ಚಾಲಕರಿಗೆ ಸಮರ್ಪಕ ವ್ಯವಸ್ಥೆ ಮಾಡಿಕೊಡುವಂತೆ ಮನವಿ ನೀಡಲಾಗಿದೆ.
ಆಟೋ ರಿಕ್ಷಾ ಚಾಲಕರ ಭಟ್ಕಳ ತಾಲೂಕು ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಶ್ರೀನಿವಾಸ ನಾಯ್ಕ , ದಾಸ ನಾಯ್ಕ, ಪ್ರಧಾನ ಕಾರ್ಯದರ್ಶಿ ಮಾದೇವ ನಾಯ್ಕ, ರಾಜು ನಾಯ್ಕ, ಮಂಜು ನಾಯ್ಕ, ನಾಗೇಂದ್ರ ದೇವಾಡಿಗ, ಕೃಷ್ಣ ಶಿರಾಲಿ, ಸುಲೇಮಾನ ಇತರರು ಇದ್ದರು.