

ಕಾಸರಗೋಡು: ನಗರದ ಖಾಸಗಿ ಆಸ್ಪತ್ರೆಯಿಂದ ಗಂಭೀರಾವಸ್ಥೆಯಲ್ಲಿದ್ದ ರೋಗಿಯನ್ನು ಕಾಞಂಗಾಡ್ ಜಿಲ್ಲಾಸ್ಪತ್ರೆಗೆ ಸಾಗಿಸುತ್ತಿದ್ದ ಆಂಬುಲೆನ್ಸ್ ವಾಹನಕ್ಕೆ ಹಾದಿ ಬಿಟ್ಟುಕೊಡ ಸುಗಮ ಸಂಚಾರಕ್ಕೆ ತಡೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಕಾರು ಚಾಲಕ ಮಹಮ್ಮದ್ ಮುಸ್ಲಿಂಮಿಲ್ ಎಂಬಾತನ ವಾಹನ ಚಾಲನಾ ಪರವಾನಗಿಯನ್ನು ಒಂದು ವರ್ಷಕ್ಕೆ ಅಮಾನತುಗೊಳಿಸಿರುವುದಲ್ಲದೆ, 9 ಸಾವಿರ ರೂ. ದಂಡ ವಿಧಿಸಲಾಗಿದೆ. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 19ರ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಎಡಪಾಲದ ಐಡಿಟಿಆರ್ನಲ್ಲಿ ಐದು ದಿವಸಗಳ ಕಾಲ ರಸ್ತೆ ಸುರಕ್ಷತಾ ತರಗತಿಗೆ ಹಾಜರಾಗಿ ಪ್ರಮಾಣಪತ್ರವನ್ನು ಹಾಜರುಪಡಿಸುವಂತೆ ಕಾಸರಗೋಡು ಎನ್ಫೋರ್ಸ್ಮೆಂಟ್ ಆರ್ಟಿಒ ಪಿ.ರಾಜೇಶ್ ಆರೋಪಿಗೆ ಸೂಚಿಸಿದ್ದಾರೆ.