ಜಿಲ್ಲಾಡಳಿತ ಭವನದ ಆವರಣದಲ್ಲಿ ನೇಣಿಗೆ ಶರಣಾಗುವ ಮೊದಲು ಜಿ.ಪಂ.ಡೈರಿಯಲ್ಲಿಯೇ ಡೆತ್‌ ನೋಟ್‌ ಬರೆದ ಚಾಲಕ

IMG_20250808_123843.jpg
Published on

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಭವನದ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೊರ ಗುತ್ತಿಗೆ ನೌಕರ
ಸಾವಿಗೂ ಮೊದಲು ಜಿ.ಪಂ.ನ ಡೈರಿಯಲ್ಲಿ ಮೃತನು ಬರೆದಿದ್ದಾರೆ ಎನ್ನಲಾದ ನಾಲ್ಕು ಪುಟಗಳ ಡೆತ್‌ ನೋಟ್‌ ಪತ್ತೆಯಾಗಿದೆ. ಇದರಲ್ಲಿ ಸಾವಿಗೆ ಕಾರಣರಾದ ವ್ಯಕ್ತಿಗಳ ಹೆಸರು, ಸರ್ಕಾರಿ ಕೆಲಸಕ್ಕೆ ಹಣ ಸಲ್ಲಿಕೆ, ಬಳಿಕ ಕೆಲಸವಾಗದಿರುವುದು, ಕಿರುಕುಳ ಸೇರಿದಂತೆ ನಾನಾ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.
ನನ್ನ ಸಾವಿಗೆ ಡಾ ಕೆ.ಸುಧಾಕರ್‌, ಮಾನ್ಯ ಮಾಜಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವರು, ಚಿಕ್ಕಕಾಡಿಗೇನಹಳ್ಳಿಯ ಎನ್‌ ಎನ್‌ ಆರ್‌ ನಾಗೇಶ್‌, ಜಿ.ಪಂ.ಲೆಕ್ಕಾಧಿಕಾರಿ ಕಚೇರಿ ಸಹಾಯಕ ಗುಮಾಸ್ತ ಮಂಜುನಾಥ್‌ ಕಾರಣ. ನನಗೆ ಸರ್ಕಾರಿ ಕೆಲಸ ತುಂಬಾ ಇಷ್ಟ. ಕೆಲಸ ಬೇಕೆಂದು ನಾಗೇಶ್‌ ಬಳಿಗೆ ಹೋದರೆ ಬಾ ಕೊಡಿಸುತ್ತೇನೆಂದು ಹೋದರು. ಸುಧಾಕರ್‌ ಸರ್‌ ನನಗೆ ತುಂಬಾ ಆತ್ಮೀಯರು, ಅನೇಕ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ ಎಂಬ ಮಾತನ್ನು ಹೇಳಿ ಮಂಜುನಾಥ್‌ ಬಳಿ ಕರೆದುಕೊಂಡು ಹೋದರು. ನಾವಿಬ್ಬರು ಭೇಟಿ ಮಾಡಿದ ಸಂದರ್ಭದಲ್ಲಿ ನನಗೆ ಲೆಕ್ಕ ಸಹಾಯಕರಾಗಿ ಸುಧಾಕರ್‌ ಮಾಡಿದರು. ಅವರ ಹತ್ತಿರ ಮಾತಾಡುತ್ತೇವೆ. ಕಳೆದ ೨೦೨೧ ನೇ ಸಾಲಿನ ಜ.೧೫ ರಂದು ನಾಗೇಶ್‌ ಫೋನ್‌ ಮಾಡಿ, ಬಸ್‌ ನಿಲ್ದಾಣ ಬಳಿ ಕರೆಸಿಕೊಂಡು ಸುಧಾಕರ್‌ ಒಪ್ಪಿಕೊಂಡಿದ್ದಾರೆ. ಸರ್ಕಾರಿ ಕೆಲಸಕ್ಕೆ ೪೦ ಲಕ್ಷ ರೂ ಕೇಳಿದರು. ಅರ್ಜೆಂಟಾಗಿ ೨೫ ಲಕ್ಷ, ೧೫ ದಿನಗಳೊಳಗೆ ಬಾಕಿ ಹಣ ಕೊಡಬೇಕು ಎಂಬುದಾಗಿ ಹೇಳಿದರು. ಇದಕ್ಕೆ ಮೊದಲು ನನ್ನ ಬಳಿ ಇರುವ ೧೫ ಲಕ್ಷ ರೂ ಜತೆಗೆ ೧೦ ಲಕ್ಷ ರೂ ಸಾಲ ಮಾಡಿ ೨೫ ಲಕ್ಷ ರೂಗಳನ್ನು ತಾ.ಪಂ.ಕಚೇರಿ ಆವರಣದಲ್ಲಿ ಹಾಗೂ  ೫ ತಿಂಗಳ ಬಳಿಕ ಮತ್ತೆ ೧೫ ಲಕ್ಷ ರೂ ಕೇಳಿದಾಗ ಮತ್ತೆ ಸಾಲ ಮಾಡಿ ೧೦ ಲಕ್ಷ ರೂ ಕೊಟ್ಟೆ. ಆದರೆ, ಕೆಲಸ ಮಾಡಿಕೊಡಲಿಲ್ಲ. ಇದನ್ನು ಪ್ರಶ್ನಿಸಿದಾಗಲೆಲ್ಲ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಕಿರುಕುಳ ನೀಡಿದರು ಎಂದು ಬರೆಯಲಾಗಿದೆ.

*ಸಾಲಕ್ಕೆ ಮತ್ತೆ ಸಾಲ*
ಲಂಚದ ಹಣವನ್ನು ಹೊಂದಿಸಲು ಸಾಲದ ಮೇಲೆ ಸಾಲ ಮಾಡಿದ್ದರ ಬಗ್ಗೆ ಡೆತ್‌ ನೋಟ್‌ ನಲ್ಲಿ ಅಳಲನ್ನು ತೋಡಿಕೊಳ್ಳಲಾಗಿದೆ. 
ಕೆಲಸಕ್ಕಾಗಿ ಕೊಟ್ಟು ಹಣವನ್ನು ಕಳೆದುಕೊಂಡಿದ್ದು ಬೇರೆಯವರ ಬಳಿ ಹೊಸದಾಗಿ ೧೬ ಲಕ್ಷ ರೂ ಸಾಲವನ್ನು ಮಾಡಿ ಬಾಪೂಜಿ ನಗರದ ಮುನಿರಾಜು ಹಾಗೂ ವಿ.ಕೃಷ್ಣಗೆ ಹಳೇ ಸಾಲವಾಗಿ ೩ ಲಕ್ಷ ರೂ ಕೊಡಲಾಗಿದೆ. ಹಾಗೆಯೇ ಆರ್ಥಿಕ ಹೊರೆಯ ತಲೆ ಭಾರವನ್ನು ತಪ್ಪಿಸಲು ಆನ್‌ ಲೈನ್‌ ಗೇಮ್‌ ಆಡಿ ೧೧ ಲಕ್ಷ ರೂ ಕಳೆದುಕೊಂಡಿದ್ದಾನೆ. ಬೈಕು, ತಾಯಿ, ಹೆಂಡತಿ ಒಡವೆಗಳು ಅಡ ಇಟ್ಟಿದ್ದು ಈ ಎಲ್ಲದರಿಂದ ಬೇಸರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಮೃತ ಬಾಬು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net