ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಬಸ್

dj nyk bus palti
Published on

ನಾಯಕನಹಟ್ಟಿ: ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ರಸ್ತೆ ಪಕ್ಕದ ಗುಂಡಿಗೆ ಉರುಳಿಬಿದ್ದ ಘಟನೆ ಸಮೀಪದ ಗಜ್ಜುಗಾನಹಳ್ಳಿ ಬಳಿ ಶನಿವಾರ ಬೆಳಗ್ಗೆ ನಡೆದಿದೆ.

ದಾಣಗೆರೆಯಿಂದ ನಾಯಕನಹಟ್ಟಿ ಮಾರ್ಗವಾಗಿ ಬಳ್ಳಾರಿಗೆ ತೆರಳುತ್ತಿದ್ದ ಬಸ್ ಗಜ್ಜುಗಾನಹಳ್ಳಿ ಸಮೀಪ ಏಕಾಏಕಿ ಬೈಕ್ ಸವಾರನೊಬ್ಬ ಬಸ್‌ಗೆ ಅಡ್ಡ ಬಂದಿದ್ದಾನೆ.

ಚಾಲಕ ತಕ್ಷಣಕ್ಕೆ ಬಲಭಾಗಕ್ಕೆ ಬಸ್‌ನ್ನು ತಿರುಗಿಸಿದ್ದಾನೆ. ಇದರಿಂದ ಬೈಕ್ ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ಬ್ರೇಕ್ ಹಾಕಿದ ವೇಗಕ್ಕೆ ಬಸ್ ನಿಂತಿದ್ದು, ಪಕ್ಕದಲ್ಲೇ ತುಂಗಾಭದ್ರ ಹಿನ್ನೀರಿನ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದ ಕಾರಣ ಮಣ್ಣು ಕುಸಿದು ಬಸ್ ಉರುಳಿಬಿದ್ದಿದೆ.

ಬಸ್‌ನಲ್ಲಿ 40 ಜನ ಪ್ರಯಾಣಿಕರಿದ್ದು, 9 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಹತ್ತಿರದಲ್ಲಿದ್ದ ತೋಟಗಳ ಮಾಲೀಕರು, ಕಾರ್ಮಿಕರು, ದಾರಿಹೋಕರು ಬಸ್‌ನಲ್ಲಿದ್ದ ಗಾಯಗೊಂಡ ಪ್ರಯಾಣಿಕರನ್ನು ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲು ನೆರವಾದರು.

ಪಿಎಸ್ಸೈ ದೇವರಾಜ್ ಸ್ಥಳಕ್ಕೆ ಭೇಟಿ ನೀಡಿ ಬಸ್ ತೆರವಿಗೆ ಅಗತ್ಯ ಕ್ರಮಕೈಗೊಂಡರು. ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net