

ಚಿಕ್ಕಮಗಳೂರು: ಮಹಾನಗರಿ ಬೆಂಗಳೂರಿನಿAದ ಕಾಫಿನಾಡು ಚಿಕ್ಕಮಗಳೂರಿಗೆ ಪ್ರವಾಸಿಗರನ್ನು ಕರೆದು ತಂದಿದ್ದ ಟಿಟಿ ಚಾಲಕನೋರ್ವ ಪ್ರವಾಸಿಗರನ್ನು ವಾಹನದಿಂದ ಇಳಿಸಿದ ಬಳಿಕ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರಿನಲ್ಲಿ ನಡೆದಿದೆ.
ಬೆಂಗಳೂರಿನ ಸೋಮನಹಳ್ಳಿ ಮೂಲದ ಅವಿನಾಶ್ (೨೫) ಮೃತ ಚಾಲಕ. ಈತ ತನ್ನ ಟಿಟಿ ವಾಹನದಲ್ಲಿ ಪ್ರವಾಸಿಗರನ್ನು ಚಿಕ್ಕಮಗಳೂರು ಜಿಲ್ಲೆಯ ಮಲಂದೂರು ಬಳಿಯ ಹೋಂಸ್ಟೇ ಒಂದಕ್ಕೆ ಕರೆದುಕೊಂಡು ಬಂದಿದ್ದ. ಪ್ರವಾಸಿಗರು ಹೋಂಸ್ಟೇ ಬಳಿ ವಾಹನದಿಂದ ಕೆಳಗೆ ಇಳಿಯುತ್ತಿದ್ದಂತೆ ಚಾಲಕ ಕುಸಿದು ಬಿದ್ದಿದ್ದಾನೆ.
ಈ ವೇಳೆ ಹೋಂ ಸ್ಟೇ ಸಿಬ್ಬಂದಿ ಹಾಗೂ ಪ್ರವಾಸಿಗರು ಚಾಲಕ ಅವಿನಾಶ್‌ನನ್ನು ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಅವಿನಾಶ್ ಮೃತಪಟ್ಟಿದ್ದಾನೆ. ಈ ಸಂಬAಧ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.