

ಕೊಳ್ಳೇಗಾಲ: ತಾಲೂಕಿನ ನರೀಪುರ ಗ್ರಾಮದ ಹೆದ್ದಾರಿಯಲ್ಲಿ ಮಂಗಳವಾರ ಸಾರಿಗೆ ಬಸ್ ಹಾಗೂ ಎಳನೀರು ತುಂಬಿದ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಚಾಲಕರು ಗಾಯಗೊಂಡಿದ್ದಾರೆ.
ಮಂಡ್ಯದ ಹಾಡ್ಯ ಗ್ರಾಮದ ಟೆಂಪೋ ಚಾಲಕ ಮುತ್ತುರಾಜು, ಬಸ್ ಚಾಲಕ ಮಧು ಗಾಯಗೊಂಡವರು. ತಾಲೂಕಿನ ನರೀಪುರ ಗ್ರಾಮದ ರಸ್ತೆಯಲ್ಲಿ ಬರುತ್ತಿದ್ದ ಬಸ್ ಬ್ರೇಕ್ ಫೈಲ್ ಆಗಿ ಎದುರುಗಡೆಯಿಂದ ಬರುತ್ತಿದ್ದ ಎಳನೀರು ತುಂಬಿದ್ದ ಟೆಂಪೋಗೆ ಡಿಕ್ಕಿಯಾದ ಪರಿಣಾಮ ಚಾಲಕರಿಬ್ಬರಿಗೂ ಗಾಯವಾಗಿದೆ.
ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಗಾಯಾಳುಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದರು. ಬಸ್‌ನಲ್ಲಿದ್ದ ಕೆಲ್ಲಂಬಳ್ಳಿ ಅನುಶ್ರೀ, ಅಂಕಯ್ಯ ಎನ್ನುವವರಿಗೆ ಸಣ್ಣಪುಟ್ಟ ಗಾಯವಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.