

ನರಗುಂದ: ಗೂಡ್ಸ್ ಮತ್ತು ಕಂಟೇನರ್ ವಾಹನ ಡಿಕ್ಕಿಯಾಗಿ ಚಾಲಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ಕೊಣ್ಣೂರ ರಸ್ತೆಯ ವೀರನಗೌಡ್ರ ಪೆಟ್ರೋಲ್ ಪಂಪ್ ಬಳಿ ಬುಧವಾರ ನಡೆದಿದೆ.
ಕುಂದಗೊಳ ತಾಲೂಕು ಹಿರೇಬೂದಿಹಾಳ ಗ್ರಾಮದ ಮಲ್ಲಿಕಸಾಬ ಬಾಬುಸಾಬ ಹುನಗುಂದ (24) ಗಾಯಗೊಂಡಿದ್ದು, ಹುಬ್ಬಳ್ಳಿಯ ಕೆಎಮ್‌ಸಿಆರ್‌ಐಗೆ ದಾಖಲಿಸಲಾಗಿದೆ. ಹುಬ್ಬಳ್ಳಿಯಿಂದ ಜಮಖಂಡಿಗೆ ಗೂಡ್ಸ್ ವಾಹನ ಹೊರಟಿತ್ತು. ಸೊಲ್ಲಾಪೂರ ಜಿಲ್ಲೆ ಮಂಗಲವೇಡ ತಾಲೂಕು ಕುಬಸಂಗಿ ಗ್ರಾಮದ ಅರ್ಬಾಜ್ ಜಹಾಂಗೀರ್ ಪಟೇಲ್ ಎಂಬಾತನ ಕಂಟೇನರ್ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗೂಡ್ಸ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.