ವಾಹನ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಎದೆನೋವು; ನಿಯಂತ್ರಣ ತಪ್ಪಿ ಫುಟ್​ಪಾತ್ ಮೇಲೇರಿ ನಿಂತ ಬಸ್​

Bus
Published on

ಬೆಂಗಳೂರು: ವಾಹನ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಎದೆನೋವು ಬಂದಿದ್ದರಿಂದ ನಿಯಂತ್ರಣ ತಪ್ಪಿದ ಬಸ್​ ಫುಟ್​ಪಾತ್ ಮೇಲೇರಿ ನಿಂತ ಪ್ರಕರಣವೊಂದು ನಡೆದಿದೆ. ಬೆಂಗಳೂರಿನ ನಾಗವಾರ ಹೆಣ್ಣೂರು ಮುಖ್ಯರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.

ಖಾಸಗಿ ಟ್ರಾವೆಲ್ಸ್​ವೊಂದರ ಬಸ್​ ಸಾಗುತ್ತಿದ್ದಾಗ ಚಾಲಕನಿಗೆ ಇದ್ದಕ್ಕಿದ್ದಂತೆ ಎದೆನೋವು ಬಂದಿದೆ. ತಕ್ಷಣ ಬಸ್​ ನಿಲ್ಲಿಸಲು ಸಾಧ್ಯವಾಗದೆ, ಅದು ನಿಯಂತ್ರಣ ತಪ್ಪಿ ಫುಟ್​ಪಾತ್ ಮೇಲೇರಿ ನಿಂತಿದೆ.

ಅದೃಷ್ಟವಶಾತ್​ ಈ ಸಂದರ್ಭದಲ್ಲಿ ಬಸ್​ನಲ್ಲಿ ಬರೀ ನಾಲ್ವರು ಮಾತ್ರವಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ. ಚಾಲಕನನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಬಾಣಸವಾಡಿ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net