ಬೆಳ್ಮಣ್ ಸೂಡ ಗ್ರಾಮದಲ್ಲಿ ಟಿಪ್ಪರ್ ಪಲ್ಟಿ, ಚಾಲಕ ದುರ್ಮರಣ

Accident
Published on

ಬೆಳ್ಮಣ್: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್ ಎಂಬಲ್ಲಿನ ಸೂಡ ಗ್ರಾಮದಲ್ಲಿ ಕ್ರಷರ್‌ನಲ್ಲಿ ಕಲ್ಲು ಅನ್‌ಲೋಡ್ ಮಾಡುವಾಗ ನಿಯಂತ್ರಣ ತಪ್ಪಿ ಟಿಪ್ಪರ್ ಮಗುಚಿ ಬಿದ್ದ ಪರಿಣಾಮ ಚಾಲಕ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಮೊಹಮ್ಮದ್ ಆಸಿಫ್ ಮೃತ ದುರ್ದೈವಿ. ಸೂಡ ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಕ್ರಷರ್ ಸಮೀಪದಲ್ಲಿ ಕಲ್ಲು ಸಂಗ್ರಹಿಸುವ ಜಾಗದಲ್ಲಿ ಬಂಡೆ ಕಲ್ಲುಗಳನ್ನು ಅನ್ ಲೋಡ್ ಮಾಡಲು ಹಿಂದಕ್ಕೆ ತೆಗೆಯುವ ಸಂದರ್ಭ ನಿಯಂತ್ರಣ ಕಳೆದುಕೊಂಡು ಆಳಕ್ಕೆ ಬಿತ್ತು. ಪರಿಣಾಮ ಟಿಪ್ಪರ್ ಚಾಲಕ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net