ಮರಕ್ಕೆ ಓಮ್ನಿ ಡಿಕ್ಕಿಯಾಗಿ ಚಾಲಕ ಮೃತ

omni accident
ಸಕ್ರೆಬೈಲ್ ಬಳಿ ಅಪಘಾತಕ್ಕೀಡಾದ ಓಮ್ನಿ.
Published on

ಶಿವಮೊಗ್ಗ: ತಾಲೂಕಿನ ಸಕ್ರೆಬೈಲು ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಮರಕ್ಕೆ ಓಮ್ನಿ ಡಿಕ್ಕಿಯಾಗಿ ಚಾಲಕ ಮೃತಪಟ್ಟಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಸೀಬಿನಕೆರೆ ನಿವಾಸಿ ಶ್ರೀಧರ್ (55) ಮೃತ ಚಾಲಕ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಶ್ರೀಧರ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾರೆಂದು ಖಚಿತಪಡಿಸಿದರು. ಕಾರ್ಯಕ್ರಮ ನಿಮಿತ್ತ ಓಮ್ನಿಯನ್ನು ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿ ಮೈಸೂರಿಗೆ ತೆರಳಿದ್ದರು. ರೈಲಿನಲ್ಲಿ ಸೋಮವಾರ ವಾಪಸ್ ಬಂದು ತೀರ್ಥಹಳ್ಳಿಗೆ ತೆರಳುವಾಗ ನಿಯಂತ್ರಣ ತಪ್ಪಿ ಮರಕ್ಕೆ ಓಮ್ನಿ ಡಿಕ್ಕಿಯಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net