

ಹನೂರು: ತಾಲೂಕಿನ ಗಡಿ ಗರಿಕೆಕಂಡಿ-ಬರಗೂರು ಮಾರ್ಗದಲ್ಲಿ ಬುಧವಾರ ರಸಗೊಬ್ಬರ ತುಂಬಿದ ಲಾರಿಯು ಕಂದಕಕ್ಕೆ ಉರುಳಿದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ತಿ.ನರಸೀಪುರದ ನಯೂಮ್ (35) ಮೃತರು. ಈತ ಸಂಜೆ ತಮಿಳುನಾಡಿನ ತೂತುಕುಡಿಯಿಂದ ಲಾರಿಯಲ್ಲಿ ರಸಗೊಬ್ಬರವನ್ನು ತುಂಬಿಕೊಂಡು ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಕರಿಕೆಕಂಡಿ ಬಳಿ ನಿಯಂತ್ರಣ ತಪ್ಪಿದ ಪರಿಣಾಮ ಲಾರಿ ಕಂದಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ ನಯೂಮ್ ಸ್ಥಳದಲ್ಲೇ ಮೃತಪಟ್ಟಿದ್ಧಾನೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ತಮಿಳುನಾಡಿನ ಬರಗೂರು ಪೊಲೀಸರು ಪರಿಶೀಲನೆ ನಡೆಸಿದರು. ಮೃತದೇಹವನ್ನು ಅಂದಿಯೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು. ಬರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.