ಕಾರು ಡಿಕ್ಕಿಯಾಗಿ ಆಟೋ ಚಾಲಕ ಸಾವು

11blrp3
Published on

ಬೇಲೂರು: ಪಟ್ಟಣ ಸಮೀಪದ ಹೊಸನಗರ ಹಾಗೂ ರಾಯಾಪುರ ನಡುವಿನ ರಸ್ತೆ ತಿರುವಿನಲ್ಲಿ ಸೋಮವಾರ ಆಟೋ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೋ ಚಾಲಕ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.


ತಾಲೂಕಿನ ಬಳ್ಳೂರು ಗ್ರಾಮದ ದರ್ಶನ್(25) ಮೃತ ಆಟೋ ಚಾಲಕ. ಹಾಸನದ ಕಡೆಯಿಂದ ಬೇಲೂರಿಗೆ ಬರುತ್ತಿದ್ದ ಕಾರು ತಿರುವಿನಲ್ಲಿ ಆಟೋಗೆ ಡಿಕ್ಕಿ ಹೊಡೆದಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬೇಲೂರು ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net