ತಾನೇ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಸತ್ತ ಚಾಲಕ; ದೇಹ ನೂರು ಮೀಟರ್ ದೂರ ಎಳೆದೊಯ್ದ ಮೇಲೆ ನಿಂತಿತು ವಾಹನ

Driver
Published on

ರಾಯಚೂರು: ತಾನೇ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಚಾಲಕ ದಯನೀಯ ಮರಣ ಕಂಡ ಅಪಘಾತವೊಂದು ಸಂಭವಿಸಿದೆ. ರಾಯಚೂರು ಜಿಲ್ಲೆಯ ಸಿರವಾರದಲ್ಲಿ ಈ ಪ್ರಕರಣ ನಡೆದಿದೆ.

ಟ್ರ್ಯಾಕ್ಟರ್ ಚಾಲಕ ಆಂಜನೇಯ (30) ಸಾವಿಗೀಡಾದ ವ್ಯಕ್ತಿ. ಹಂಪ್‌ನಲ್ಲಿ ಜಂಪ್ ಆದಾಗ ಟ್ರ್ಯಾಕ್ಟರ್‌ನಿಂದ ಕೆಳಕ್ಕೆ ಬಿದ್ದ ಚಾಲಕ ಹಿಂದಿನ ಚಕ್ರದಡಿಗೆ ಸಿಲುಕಿಕೊಂಡಿದ್ದ. ಆತನ ದೇಹವನ್ನು ಸುಮಾರು ಒಂದು ನೂರು ಮೀಟರ್ ದೂರ ಎಳೆದೊಯ್ದ ಬಳಿಕ ಟ್ರ್ಯಾಕ್ಟರ್ ನಿಂತಿದೆ.

ಟ್ರ್ಯಾಕ್ಟರ್‌ನಲ್ಲಿ ಮರ ತುಂಬಿಸಿಕೊಂಡು ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಅಪಘಾತಕ್ಕೀಡಾದ ಟ್ರ್ಯಾಕ್ಟರ್ ನೂರು ಮೀಟರ್ ಸಾಗಿದ ಬಳಿಕ ಆಟೋ ಹಾಗೂ ಬೈಕ್‌ವೊಂದಕ್ಕೆ ಡಿಕ್ಕಿಯಾಗಿ, ಫರ್ಟಿಲೈಜರ್ ಅಂಗಡಿಯೊಂದರ ಮುಂದೆ ಹೋಗಿ ನಿಂತಿದೆ.

ಅದೃಷ್ಟವಶಾತ್ ಆ ಸಂದರ್ಭದಲ್ಲಿ ರಸ್ತೆಯಲ್ಲಿ ಸಾರ್ವಜನಿಕರ ಓಡಾಟ ಇರದ ಕಾರಣ ಮತ್ತಷ್ಟು ಸಾವು-ನೋವು ಸಂಭವಿಸುವ ಸಾಧ್ಯತೆ ತಪ್ಪಿದಂತಾಗಿದೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net