ಕಾರು ಅಪಘಾತದಲ್ಲಿ ಚಾಲಕ, ಮಗು ಸಾವು

BIRUR car
ಬೀರೂರಿನ ಹೆದ್ದಾರಿ 206ರ ಪುಂಡನಹಳ್ಳಿ ಗೇಟ್ ಬಳಿ ಅಪಘಾತಕ್ಕೀಡಾದ ಕಾರು.
Published on

ಬೀರೂರು: ಸಮೀಪದ ಪುಂಡನಹಳ್ಳಿ ಗೇಟ್ ಬಳಿ ಶುಕ್ರವಾರ ತಡರಾತ್ರಿ ಕಾರು ಸೇತುವೆಗೆ ಡಿಕ್ಕಿ ಹೊಡೆದು 2 ವರ್ಷದ ಮಗು ಹಾಗೂ ಚಾಲಕ ಮೃಪಟ್ಟಿದ್ದಾರೆ.

ಕಾರು ಚಾಲಕ ಪೃಥ್ವಿರಾಜ್ ಸಿಂಗ್(36) ಮತ್ತು ವಿಕ್ರಾಂತ್(2) ಮೃತ ದುರ್ದೈವಿಗಳು. ತುಮಕೂರು ಜಿಲ್ಲೆ ಗುಬ್ಬಿಯಿಂದ ಮುರುಡೇಶ್ವರ ಪ್ರವಾಸಕ್ಕೆ ನವೀನ್ ಎಂಬುವರ ಕುಟುಂಬ ಮತ್ತು ಸ್ನೇಹಿತರಾದ ಕಾವ್ಯಾ, ಅವರ ಮಗಳು ಅನುಶ್ರೀ ಹೊರಟಿದ್ದರು. ತಡರಾತ್ರಿ 1 ಗಂಟೆ ವೇಳೆ ಮಳೆ ಆರಂಭವಾದಾಗ ನಿಯಂತ್ರಣ ತಪ್ಪಿದ ಕಾರು ಸೇತುವೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲಿಯೇ ಚಾಲಕ ಪೃಥ್ವಿರಾಜ್ ಸಿಂಗ್ ಮತ್ತು ನವೀನ್ ಅವರ ಮಗು ವಿಕ್ರಾಂತ್ ಮೃತಪಟ್ಟಿದ್ದಾರೆ. ನವೀನ್, ಪತ್ನಿ ಪವಿತ್ರಾ, ಮತ್ತೊಬ್ಬ ಮಗ ನಿಖಿಲ್, ಕುಟುಂಬದ ಸ್ನೇಹಿತೆ ಕಾವ್ಯಾ, ಅನುಶ್ರೀ ಅವರಿಗೆ ಗಂಭೀರ ಗಾಯಗಳಾಗಿವೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net