

ಹೊನ್ನಾವರ: ಗೇರುಸೊಪ್ಪ ಮಾರ್ಗದ ಕೆಎಸ್ಆರ್ಟಿಸಿ ಬಸ್ ಚಾಲಕ ಜನಾರ್ದನ ನಾಯ್ಕ ಎಂಬುವವರು ಬಸ್ನಲ್ಲಿ ಸ್ಥಳಾವಕಾಶ ಇದ್ದರೂ ಬಸ್ ನಿಲ್ಲಿಸದಿರುವುದನ್ನು ಖಂಡಿಸಿ ಸಾರ್ವಜನಿಕರು ಹೊನ್ನಾವರ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿಗಳ ಕಚೇರಿಗೆ ತೆರಳಿ ಬಸ್ ಚಾಲಕ ಮತ್ತು ನಿರ್ವಾಹಕರನ್ನು ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡರು.
ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ ಕೆಲ ಚಾಲಕರು ಮತ್ತು ನಿರ್ವಾಹಕರಿಂದ ಆಗುವ ತೊಂದರೆ ಗಮನಕ್ಕೆ ತಂದರು. ಮುಂದೆ ಈ ರೀತಿ ಆದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಶಿಸ್ತು ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಎಚ್ಚರಿಸಿದರು. ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ, ವಕೀಲರಾದ ಎಂ.ಎನ್. ಸುಬ್ರಮಣ್ಯ, ಸೂರಜ್ ನಾಯ್ಕ, ಬಾಲಚಂದ್ರ ನಾಯ್ಕ, ಕೃಷ್ಣ ಮಾರಿಮನೆ, ಕೃಷ್ಣ ಹರಿಜನ, ಮೋಹನ ನಾಯ್ಕ ಸೇರಿ ಹಲವು ಪ್ರಯಾಣಿಕರು ಇದ್ದರು.