ದೂರುಗಳಿಗೆ ಆಸ್ಪದೆ ಕೊಡದೇ ವಾಹನ ಓಡಿಸಿ

h12-nwksrtc
Published on

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಭರಮಗೌಡ(ರಾಜು) ಅಲಗೌಡ ಕಾಗೆ ಅವರು ನಗರದ ಎನ್‌ಡಬ್ಲುೃಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಬುಧವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.
ನಂತರ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ.ಎಂ. ಅವರೊಂದಿಗೆ ಹುಬ್ಬಳ್ಳಿ ಗ್ರಾಮಾಂತರ ಘಟಕ-1ಕ್ಕೆ ಭೇಟಿ ನೀಡಿ, ಘಟಕದ ಸಿಬ್ಬಂದಿ ಕುಂದುಕೊರತೆ ಆಲಿಸಿದರು. ನಿಯಮಿತವಾಗಿ ವಾಹನಗಳ ತಾಂತ್ರಿಕ ನಿರ್ವಹಣೆ ಕುರಿತು, ಸರಿಯಾದ ವೇಳೆಗೆ ವಾಹನಗಳ ಕಾರ್ಯಾಚರಣೆ ಮಾಡುವುದು ಹಾಗೂ ಘಟಕದ ಆವರಣ ಸ್ವಚ್ಛವಾಗಿಡುವುದರ ಬಗ್ಗೆ ಸಂಬಂಧಿಸಿದ ಘಟಕದ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದರು. ಹಾಗೆಯೇ ಸಾರ್ವಜನಿಕ ದೂರುಗಳಿಗೆ ಆಸ್ಪದ ನೀಡದಂತೆ ವಾಹನಗಳ ಕಾರ್ಯಾಚರಣೆ ಮಾಡುವಂತೆ ಸೂಚಿಸಿದರು.
ಹುಬ್ಬಳ್ಳಿ ನಗರದ ಹೊಸೂರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಬಸ್ ನಿಲ್ದಾಣಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡುವಂತೆ ಮತ್ತು ಪ್ರಯಾಣಿಕ ಸ್ನೇಹಿ ಬಸ್ ನಿಲ್ದಾಣವನ್ನಾಗಿ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಲು ಹಾಗೂ ಪ್ರಸ್ತುತ ಶಾಲಾ-ಕಾಲೇಜ್ ಪ್ರಾರಂಭವಾಗಿದ್ದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಹಾಜರಿದ್ದ ಸಂಸ್ಥೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಹೊಸೂರ ಬಸ್ ನಿಲ್ದಾಣದ ವಿದ್ಯಾರ್ಥಿ ಬಸ್ ಪಾಸ್ ಕೌಂಟರ್‌ನಲ್ಲಿ ಪಾಸ್ ವಿತರಣೆ ಕುರಿತು ಪರಿಶೀಲಿಸಿ ಹಾಜರಿದ್ದ ವಿದ್ಯಾರ್ಥಿಗಳಿಗೆ ಖುದ್ದಾಗಿ ಬಸ್ ಪಾಸ್ ವಿತರಿಸಿದರು.
ಅಧಿಕಾರಿಗಳಾದ ವಿವೇಕಾನಂದ ವಿಶ್ವಜ್ಞ, ರಾಜೇಶ ಹುದ್ದಾರ್, ಬಿ. ಬೋರಯ್ಯ, ಪಿ.ವೈ. ನಾಯಕ್, ವಿಜಯಶ್ರೀ ನರಗುಂದ, ಮಾಲತಿ.ಎಸ್.ಎಸ್., ಜಗದಂಬಾ ಕೋಪರ್ಡೆ, ಇಸ್ಮಾಯಿಲ್ ಕಂದಗಲ್, ದಿವಾಕರ ಯರಗೊಪ್ಪ, ಸತೀಶರಾಜು.ಜೆ., ಎಂ.ಬಿ. ಕಪಲಿ, ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ, ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಮರಿದೇವರಮಠ, ವಿಭಾಗೀಯ ಸಂಚಾರಾಧಿಕಾರಿಗಳಾದ ಕೆ.ಎಲ್.ಗುಡೆನ್ನವರ ಮತ್ತು ರವಿ ಅಂಚಿಗಾವಿ ಇತರ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net