ಸಂಯಮದಿಂದ ವಾಹನ ಚಾಲನೆ ಮಾಡಿ

sri-2 (8)
Published on

ಶೃಂಗೇರಿ: ವಾಹನ ಚಲಾಯಿಸುವಾಗ ನಾನು ಸುರಕ್ಷಿತವಾಗಿದ್ದರೆ ನನ್ನ ಕುಟುಂಬ ಸುರಕ್ಷಿತ ಎಂಬ ಅರಿವು ಇರಬೇಕು.ಬೇಜವಾಬ್ದಾರಿಯಿಂದ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತದೆ ಎಂದು ಎಎಸ್‌ಐ ಮೋಹನ್ ಕುಮಾರ್ ತಿಳಿಸಿದರು.

ಮಂಗಳವಾರ ರೋಟರಿ ಸಂಸ್ಥೆ ವತಿಯಿಂದ ರೋಟರಿ ಜಿಲ್ಲೆ 3182ರ ಜಿಲ್ಲಾ ಯೋಜನೆ ರಸ್ತೆ ಸುರಕ್ಷತಾ ಅಭಿಯಾನದಲ್ಲಿ ಸುರಕ್ಷಿತವಾಗಿ ವಾಹನ ಚಲಾಯಿಸಿ-ಜೀವ ಉಳಿಸಿ ಎಂಬ ಸ್ಟಿಕರ್‌ನ್ನು ವಾಹನಗಳಿಗೆ ಅಂಟಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒತ್ತಡದಲ್ಲಿ ಚಾಲಕರು ವಾಹನ ಚಲಾಯಿಸಬಾರದು. ಸಂಯಮ ಹಾಗೂ ಸಮಚಿತ್ತದಿಂದ ಸಂಚಾರ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು.ಪ್ರತಿದಿನ ವಾಹನ ಅವಘಡಗಳ ಸಂಖ್ಯೆ ಹೆಚ್ಚುತ್ತಿದ್ದು ಜನರು ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.

ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮದ್ಯಪಾನ ನಿಷೇಧಿಸಲಾಗಿದೆ. ಜೀವದ ಸುರಕ್ಷತೆಗೆ ಚಾಲಕರು ಹೆಚ್ಚಿನ ಕಾಳಜಿ ವಹಿಸಬೇಕು. ವಾಹನ ಚಲಾಯಿಸುವ ಮುನ್ನ ವಾಹನದ ಬಗ್ಗೆ ಕೂಲಂಕಷವಾಗಿ ಪರೀಕ್ಷಿಸಬೇಕು. ಟ್ರಾಫಿಕ್ ಸಿಗ್ನಲ್ ಕುರಿತು ಹೆಚ್ಚು ಗಮನ ಇರಿಸಿ ಚಾಲಕರು ವಾಹನ ಚಲಾಯಿಸಬೇಕು ಎಂದರು.

ಇಒ ಸುದೀಪ್, ರೋಟರಿ ಅಧ್ಯಕ್ಷ ಸುಬ್ರಹ್ಮಣ್ಯ ಅಂಬಲಮನೆ, ಕಾರ್ಯದರ್ಶಿ ಪ್ರಿಯದರ್ಶಿನಿ ಹೆಗಡೆ, ಮಾಜಿ ಕಾರ್ಯದರ್ಶಿ ಸುರೇಶ್ ಹೆಗಡೆ, ಇನ್ನರ್‌ವ್ಹೀಲ್ ಸಂಸ್ಥೆ ಅಧ್ಯಕ್ಷೆ ಮಂಜುಳಾ, ರೋಟ್ರಾಕ್ಟ್ ಅಧ್ಯಕ್ಷೆ ಐಶ್ವರ್ಯ,ಪಪಂ ಅಧ್ಯಕ್ಷ ಎಚ್.ಎಸ್.ವೇಣುಗೋಪಾಲ್, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ, ಜೆಸಿಬಿಎಂ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಸ್ವಾಮಿ ಡಾ.ಅಣ್ಣಾದೊರೈ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net