ವಿವಿಧ ಕಾರ್ಯಕ್ರಮಗಳಿಗೆ ಚಾಲನೆ

h6-ssk
Published on

ಹುಬ್ಬಳ್ಳಿ: ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವ ನಿಮಿತ್ತ ನಗರದಲ್ಲಿ ಮಂಗಳವಾರ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಸತೀಶ ಮೆಹರವಾಡೆ ಮಾತನಾಡಿ, ನಮ್ಮ ಸಮಾಜದ ಕುಲಕತಿಲಕ ರತ್ನ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವ ನ. 8ರಂದು ಏರ್ಪಡಿಸಲಾಗಿದೆ. ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಬೆಳಗ್ಗೆ 6 ಗಂಟೆಯಿಂದ 9ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 4 ಗಂಟೆಗೆ ಭವ್ಯ ಮೆರವಣಿಗೆ ಜರುಗಲಿದೆ. ಸಮಾಜದವರು ಒಗ್ಗಟ್ಟಿನಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಹಾಗೂ ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.

ಕೇಂದ್ರ ಪಂಚ ಸಮಿತಿ ಉಪ ಮುಖ್ಯ ಧರ್ಮದರ್ಶಿ ಕಿರಣ ಪಿ. ಪೂಜಾರಿ, ಭಾಸ್ಕರ ಜಿತೂರಿ, ಉತ್ಸವ ಸಮಿತಿ ಸಂಚಾಲಕ ಮಂಜುನಾಥ ರತನ, ಎಸ್.ಎಸ್.ಕೆ. ಕಾಲೇಜ್ ಚೇರ್ಮನ್ ನೀಲಕಂಠಸಾ ಜಡಿ, ಶ್ರೀ ಸಿದ್ಧಾರೂಢ ಮಠ ಟ್ರಸ್ಟಿ ಬಾಳು ಮಗಜಿಕೊಂಡಿ, ಮಾಜಿ ಮಹಾಪೌರ ಡಿ.ಕೆ. ಚವ್ಹಾಣ, ಪ್ರಮುಖರಾದ ಎನ್.ಎನ್. ಖೋಡೆ, ಟಿ.ವಿ. ಪೂಜಾರಿ, ಶ್ರೀಕಾಂತ ಹಬೀಬ, ಯೋಗೇಶ ಹಬೀಬ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net