

ಮಡಿಕೇರಿ:
ವಿರಾಜಪೇಟೆ-ಭಾಗಮಂಡಲ-ಮಡಿಕೇರಿ ಮಾರ್ಗದ ಬಸ್ ಸಂಚಾರಕ್ಕೆ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶನಿವಾರ ಚಾಲನೆ ನೀಡಿದರು. ನಂತರ ಮಾತನಾಡಿ, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯನ್ನು ಗಮನಿಸಿ ವಿರಾಜಪೇಟೆ-ಭಾಗಮಂಡಲ-ಮಡಿಕೇರಿ ಮಾರ್ಗದಲ್ಲಿ ಬಸ್ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನಿAದ ಪ್ರತಿನಿತ್ಯ ರಾತ್ರಿ 11.15 ಗಂಟೆಗೆ ಬಸ್ ಹೊರಡಲಿದ್ದು, ವಿರಾಜಪೇಟೆಗೆ ಆಗಮಿಸಿ ಬೆಳಗ್ಗೆ 7.15 ಗಂಟೆಗೆ ಭಾಗಮಂಡಲಕ್ಕೆ ಆಗಮಿಸಲಿದೆ. ಬಳಿಕ ಬೆಳಗ್ಗೆ 7.30 ಗಂಟೆಗೆ ಭಾಗಮಂಡಲದಿAದ ಹೊರಟು ಬೆಳಗ್ಗೆ 9 ಗಂಟೆಗೆ ಮಡಿಕೇರಿಗೆ ತಲುಪಲಿದೆ ಎಂದರು.
ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕ ಎಚ್.ಇ. ವೀರಭದ್ರ ಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ ಮತ್ತು ಇತರರು ಇದ್ದರು.