ಶ್ರೀ ಲೋಕದ ಮಾರಮ್ಮನವರ ಕರಗ ಮಹೋತ್ಸವಕ್ಕೆ ಚಾಲನೆ

10 ckm 25
Published on

ಚಿಕ್ಕಮಗಳೂರು: ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿ ಶುಕ್ರವಾರ ಶ್ರೀ ಲೋಕದ ಮಾರಮ್ಮನವರ ಕರಗ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಪಟ್ಟಣದ ಸುಂಡೆಕೆರೆ ಹೊಳೆ ದಂಡೆಯಲ್ಲಿ ಲೋಕದ ಮಾರಮ್ಮನವರ ಹೂವಿನ ಕರಗವನ್ನು ಸಿದ್ಧಪಡಿಸಿ, ಕಂಕಣಧಾರಿಗಳು ತಲೆ ಮೇಲೆ ಹೊತ್ತು ಪಟ್ಟಣಕ್ಕೆ ಕರೆತಂದರು. ನಂತರ ಪರಿಮಳಮ್ಮ ದೇವಾಲಯದಲ್ಲಿ ಭಕ್ತರು ಸಂಭ್ರಮದಿಂದ ದೇವಿಯನ್ನು ಸ್ವಾಗತಿಸಿದರು. ಇಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾರ್ಕೆಟ್ ರಸ್ತೆಯಲ್ಲಿ ಶ್ರೀ ಲೋಕದ ಮಾರಮ್ಮನವರನ್ನು ಪ್ರತಿಷ್ಠಾಪಿಸಲಾಯಿತು.
ಮೂರು ದಿನಗಳ ಪೂಜೆ: ಶುಕ್ರವಾರ ಪಟ್ಟಣದ ಸಂತೆ ಮೈದಾನ, ಶೆಟ್ಟರ ಬೀದಿ, ಕುರುಕುಮಕ್ಕಿಯಲ್ಲಿ ದೇವಿಯನ್ನು ಹೊತ್ತು ಭಕ್ತರ ಮನೆ ಮನೆಗಳಲ್ಲಿ ಪೂಜೆ ಸ್ವೀಕರಿಸಲಾಯಿತು. ಶನಿವಾರ ಹಳೇಮೂಡಿಗೆರೆ, ರೈತಭವನ, ಲೋಕವಳ್ಳಿ, ಬಿಳುಗುಳ, ದೊಡ್ಡಿಬೀದಿ ಮಾರ್ಗದಲ್ಲಿ ದೇವಿಯ ಪುರ ಸಂಚಾರ ನಡೆಯಲಿದೆ. ಭಾನುವಾರ ಛತ್ರಮೈದಾನ, ಮಾರ್ಕೆಟ್ ರಸ್ತೆಯಲ್ಲಿ ದೇವಿಯ ಪುರ ಸಂಚಾರ ನಡೆಯಲಿದ್ದು, ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net