

ಧಾರವಾಡ: ನಗರದ ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗ, ಎಎಸ್‌ಐ ಹುಬ್ಬಳ್ಳಿ-ಧಾರವಾಡ ಶಾಖೆ, ಕಿಮ್ಸ್ ಮತ್ತು ಅಸೋಸಿಯೇಶನ್ ಆಫ್ ಮಿನಿಮಲ್ ಆಕ್ಸೆಸ್ ಸರ್ಜನ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಎರಡು ದಿನಗಳ ಕಾಲ ಎಸ್‌ಡಿಎಂ ಕಾಲೇಜಿನಲ್ಲಿ ಏರ್ಪಡಿಸಿರುವ ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಕುರಿತ ಶಸ್ತ್ರ ಚಿಕಿತ್ಸಾ ಕಾರ್ಯಾಗಾರಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಎಸ್‌ಡಿಎಂ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ನಿರಂಜನ್ ಕುಮಾರ ಕಾರ್ಯಾಗಾರ ಉದ್ಘಾಟಿಸಿದರು. ಕೊಯಮತ್ತೂರ ಜೆಮ್ ಆಸ್ಪತ್ರೆ ಅಧ್ಯಕ್ಷ ಡಾ. ಸಿ. ಪಳನಿವೇಲು, ಜೆಮ್ ಆಸ್ಪತ್ರೆಯ ಡಾ. ಸಿ. ಜೆ. ವರ್ಗೀಸ್ ವಿಶೇಷ ಉಪನ್ಯಾಸ ನೀಡಿದರು.
ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲೆ ಡಾ. ರತ್ನಮಾಲಾ ದೇಸಾಯಿ, ಎಎಸ್‌ಐ ಅಧ್ಯಕ್ಷ ಡಾ.ಸಿ. ಕೆ. ಪಾಟೀಲ, ಇತರರು ಇದ್ದರು. ಕಾರ್ಯಗಾರದಲ್ಲಿ 250ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಡಾ. ಬಿ. ಶ್ರೀನಿವಾಸ ಪೈ ಸ್ವಾಗತಿಸಿದರು. ಡಾ. ಹರ್ಷಿತಾ ನಿರೂಪಿಸಿದರು. ಡಾ. ಹರ್ಷ ಕೊಡ್ಲಿವಾಡಮಠ ವಂದಿಸಿದರು.