

ಮೈಸೂರು: ಹಾಕಿ ಮೈಸೂರು ಸಂಸ್ಥೆ ವತಿಯಿಂದ ನಗರದ ಮೈಸೂರು ವಿಶ್ವವಿದ್ಯಾಲಯದ ಹಾಕಿ ಮೈದಾನದಲ್ಲಿ ಆಯೋಜಿಸಿರುವ ಪುರುಷರ ಆಹ್ವಾನಿತ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಗೆ ಗುರುವಾರ ಚಾಲನೆ ದೊರೆಯಿತು.
ಮೈಸೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ವೆಂಕಟೇಶ್, ಉದ್ಯಮಿ ಎಂ.ಪಿ.ಗಣಪತಿ ಪಂದ್ಯಾವಳಿಗೆ ಚಾಲನೆ ನೀಡಿ ಶುಭಹಾರೈಸಿದರು.
ಪಾಲಿಕೆ ಮಾಜಿ ಸದಸ್ಯರಾದ ಶಿವಕುಮಾರ್, ಸುಬ್ಬಯ್ಯ, ಸಂಸ್ಥೆ ಅಧ್ಯಕ್ಷ ದಿಲೀಪ್, ಕಾರ್ಯದರ್ಶಿ ಸಿ.ಟಿ.ಸತೀಶ್, ಖಜಾಂಚಿ ಪೊನ್ನಪ್ಪ, ಗಿರೀಶ್ ಹಾಜರಿದ್ದರು.