

ಮಡಿಕೇರಿ: ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ಸಮಾಗಮ ಹೆಸರಿನ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭ ಗುರುವಾರ ಜರುಗಿತು.
ಕೊಡಗು ವಿದ್ಯಾಲಯದ ಕ್ರೀಡಾ ಅಧ್ಯಕ್ಷ್ಯ ಕೋಡಿಮಣಿಯಂಡ ರಘು ಮಾದಪ್ಪರವರು ಗಾಳಿಯಲ್ಲಿ ಬಲೂನ್‌ಗಳ ಗುಚ್ಛವನ್ನು ಹಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಆಡಳಿತ ಮಂಡಳಿಯ ಸದಸ್ಯೆ ನಿಯತ ದೇವಯ್ಯ, ಶಾಲೆಯ ಪ್ರಾಂಶುಪಾಲರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಕಾರ್ಯನಿರ್ವಾಹಣಾಧಿಕಾರಿಗಳು ಪಾಲ್ಗೊಂಡಿದ್ದರು.
ನುರಿತ ತರಭೇತುದಾರರಿಂದ ಕ್ಯಾಲಿಗ್ರಾಫಿ ಹಾಗೂ ಚಿತ್ರಕಲಾ ಪ್ರದರ್ಶನ ನಡೆಯಿತು. ಮೇ೧ ರವರೆಗೆ ನಡೆಯುವ ಸಮಾಗಮ ಶಿಬಿರದಲ್ಲಿ ೨೫೦ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ. ಸಮಾಗಮ ಶಿಬಿರದಲ್ಲಿ ಚಿತ್ರಕಲೆ, ಕ್ಲೇ ಮೋಡ್ಲಿಂಗ್, ಟ್ರಡಿಷನಲ್ ವಾಲ್ ಪೇಂಟಿಂಗ್ ಲ್ಯಾಂಡ್ ಸ್ಕೇಪ್, ಗಾಳಿಪಟ ರಚನೆ, ಮಾಸ್ಕ್ ಮೇಕಿಂಗ್, ಪಾಟ್ ಪೇಂಟಿಂಗ್, ಬೆಸ್ಟ್ ಔಟ್ ಒಫ್ ವೇಸ್ಟ್, ಸ್ಟಿಲ್ ಲೈಫ್ ವರ್ಕ್ಸ್, ಕಾರ್ವಿ ಆರ್ಟ್, ನೃತ್ಯ ವಿಭಾಗದಲ್ಲಿ ಭರತನಾಟ್ಯ, ಮೋಹಿನಿ ಆಟಮ್, ಕ್ಯಾಲಿಗ್ರಾಫಿ, ಸಂಗೀತ, ಹಾಕಿ, ಕ್ರಿಕೆಟ್, ಹ್ಯಾಂಡ್ ಬಾಲ್, ಚೆಸ್, ಬಾಸ್ಕೆಟ್ ಬಾಲ್, ಫುಟ್ಬಾಲ್, ಟೇಬಲ್ ಟೆನಿಸ್ ಮತ್ತು ಅಥ್ಲೇಟಿಕ್ಸ್ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.