ಸೈಂಟ್ ಆನ್ಸ್ ನುಡಿನೃತ್ಯ ಸಂಭ್ರಮಕ್ಕೆ ಚಾಲನೆ

2 vpt 1.2
ಕನ್ನಡ ಭಾಷಾ ವಿಭಾಗದ ಮುಖ್ಯಸ್ಥರಾದ ಅರ್ಜುನ್ ಮೌರ್ಯ ಅವರು ನಗಾರಿ ಬಾರಿಸುವುದರ ಮೂಲಕ ನುಡಿ ನೃತ್ಯ ಸಂಭ್ರಮ-24ಕ್ಕೆ ಚಾಲನೆ ನೀಡಿದರು. ತೃಪ್ತಿ ಬೋಪಣ್ಣ, ಹೇಮಾ, ಶಾಂತಿ ಭೂಷಣ್, ರಾಜೇಶ್ ಪದ್ಮನಾಭ, ಇದ್ದರು.
Published on

ವಿರಾಜಪೇಟೆ: ಇಲ್ಲಿನ ಸೈಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ಭಾಷಾ ವಿಭಾಗ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಇತ್ತೀಚೆಗೆ ಆಯೋಜಿಸಿದ್ದ ನುಡಿನೃತ್ಯ ಸಂಭ್ರಮ-24ಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

ಕನ್ನಡ ಭಾಷಾ ವಿಭಾಗ ಹಾಗೂ ಸಾಹಿತ್ಯ ಸಂಘ ಮತ್ತು ವಿರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಹಭಾಗಿತ್ವದಲ್ಲಿ ಈ ವರ್ಷ ನುಡಿ ನೃತ್ಯ ಸಂಭ್ರಮ-24 ನುಡಿಹಬ್ಬ ಸೈಂಟ್ ಆವರಣದಲ್ಲಿ ಜರುಗುತ್ತಿದ್ದು ಇದರ ಪ್ರಯುಕ್ತ ಮೊದಲಿಗೆ ಕೋಟಿ ಕಂಠ ಗಾಯನವನ್ನು ಎಲ್ಲ ವಿಭಾಗದ ಸಹ ಪ್ರಾಧ್ಯಾಪಕರು ಹಾಗೂ ಕನ್ನಡ ವಿದ್ಯಾರ್ಥಿ ಬಳಗದ ವಿದ್ಯಾರ್ಥಿಗಳು ಹಾಡಿದರು.

ತದ ನಂತರ ಪದವಿ ವಿಭಾಗದ ವ್ಯವಸ್ಥಾಪಕರಾದ ರೆ.ಫಾ.ಮದಲೈ ಮುತ್ತು ಅವರು ಸೈಂಟ್ ಆನ್ಸ್ ನುಡಿನೃತ್ಯ ಸಂಭ್ರಮದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು.

ಕನ್ನಡ ಭಾಷಾ ವಿಭಾಗದ ಮುಖ್ಯಸ್ಥ ಅರ್ಜುನ್ ಮೌರ್ಯ ಅವರು ನಗಾರಿ ಬಾರಿಸುವುದರ ಮೂಲಕ ನುಡಿ ನೃತ್ಯ ಸಂಭ್ರಮ-24ಕ್ಕೆ ಚಾಲನೆ ನೀಡಿದರು. ಕನ್ನಡ ವಿದ್ಯಾರ್ಥಿ ಬಳಗದ ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶನವನ್ನು ನೀಡಿದರು.

ರೆ.ಫಾ. ಮದಲೈ ಮುತ್ತು ಮಾತನಾಡಿ, ನ.20ರಂದು ನಡೆಯುವ ನುಡಿನೃತ್ಯ ಸಂಭ್ರಮಕ್ಕೆ ಶುಭ ಕೋರಿದರು. ವಿರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಜೇಶ್ ಪದ್ಮನಾಭ, ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಚಾಲಕಿ ಬಿ.ಡಿ.ಹೇಮಾ, ಕನ್ನಡ ವಿಭಾಗದ ಪ್ರಾಧ್ಯಾಪಕಿ ಪ್ರತಿಮಾ ರೈ, ವಿಭಾಗಗಳ ಮುಖ್ಯಸ್ಥರು, ಸಹ ಪ್ರಾಧ್ಯಾಪಕರು, ಕನ್ನಡ ವಿದ್ಯಾರ್ಥಿ ಬಳಗದ ಪದಾಧಿಕಾರಿಗಳು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net