ಪ್ರಾಥಮಿಕ ಶಾಲಾ ಕ್ರೀಡಾಕೂಟಕ್ಕೆ ಚಾಲನೆ

Drive to primary school sports event
ಕಮತಗಿಯ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ನಡೆದ ಪ್ರಾಥಮಿಕ ಶಾಲೆಗಳ ವಾರ್ಷಿಕ ಕ್ರೀಡಾಕೂಟಕ್ಕೆ ಹುನಗುಂದ ತಾಲೂಕಿ ದೈಹಿಕ ಪರಿವೀಕ್ಷಕ ಎಸ್.ಟಿ. ಫೈಲ್ ಚಾಲನೆ ನೀಡಿದರು. ಸಿಆರ್‌ಪಿ ಪಿ.ಎಸ್. ಚವಾಣ್, ಮುಖ್ಯಶಿಕ್ಷಕ ಎಂ.ಪಿ. ಕುದರಿ, ಎ.ಆರ್. ಕಡ್ಲಿಮಟ್ಟಿ, ಜಿ.ಎ. ಗೌಡರ, ಎಸ್.ಬಿ. ತುಂಬರಗುದ್ದಿ, ಬಿ.ಎಸ್. ನಿಡಗುಂದಿ, ಶಿಕ್ಷಕ ವೈ.ಪಿ. ಶಾಂತರಾಜ್, ಐ.ಬಿ. ಆದಾಪೂರ ಇದ್ದರು.
Published on

ಕಮತಗಿ: ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಾರದಾ ಹಿರಿಯ ಪ್ರಾಥಮಿಕ ಶಾಲೆಯ ಆತಿಥ್ಯದಲ್ಲಿ ಕಮತಗಿ ಮತ್ತು ಮುಗನೂರ ಕ್ಲಸ್ಟರ್‌ಮಟ್ಟದ ಪ್ರಾಥಮಿಕ ಶಾಲೆಗಳ ವಾರ್ಷಿಕ ಕ್ರೀಡಾಕೂಟಕ್ಕೆ ಹುನಗುಂದ ತಾಲೂಕು ದೈಹಿಕ ಪರಿವೀಕ್ಷಕ ಎಸ್.ಟಿ. ಫೈಲ್ ಚಾಲನೆ ನೀಡಿದರು.

ಸಿಆರ್‌ಪಿ ಪಿ.ಎಸ್.ಚವಾಣ್, ಮುಖ್ಯಶಿಕ್ಷಕ ಎಂ.ಪಿ. ಕುದರಿ, ಎ.ಆರ್. ಕಡ್ಲಿಮಟ್ಟಿ, ಜಿ.ಎ. ಗೌಡರ, ಎಸ್.ಬಿ. ತುಂಬರಗುದ್ದಿ, ಬಿ.ಎಸ್. ನಿಡಗುಂದಿ, ಶಿಕ್ಷಕರಾದ ವೈ.ಪಿ. ಶಾಂತರಾಜ್, ಐ.ಬಿ. ಆದಾಪೂರ, ವಿ.ಎನ್. ಪಾಟೀಲ, ಬಿ.ಎಸ್. ರಾಠೋಡ, ಎಚ್.ಎಚ್. ಆಲಗುಂಡಿ, ಹುಚ್ಚೇಶ ಗುಳೇದ, ಈರಣ್ಣ ಧೂಪದ, ಡಬ್ಲೂ.ಆರ್. ಶಿವಪುತ್ರ ಇತರರಿದ್ದರು.

ವಿಜೇತ ವಿದ್ಯಾರ್ಥಿಗಳು

ಬಾಲಕಿಯರ ವಿಭಾಗದಲ್ಲಿ 600 ಮೀಟರ್ ಓಟದಲ್ಲಿ ವಿಶ್ವಚೇತನ ಶಾಲೆಯ ಈರಮ್ಮ ಕಮತಗಿ (ಪ್ರಥಮ), ಬಾಲಕರ ವಿಭಾಗದಲ್ಲಿ 600 ಮೀಟರ್ ಓಟದಲ್ಲಿ ಹುಚ್ಚೇಶ್ವರ ಶಾಲೆಯ ಅಮೀತ್ ಹಂಚಿನಾಳ(ಪ್ರಥಮ), ಬಾಲಕರ ಗುಂಡು ಎಸೆತ ಸ್ಪರ್ಧೆಯಲ್ಲಿ ಕುಬೇರಪ್ಪ ಚಿತ್ರಗಾರ ಶಾಲೆಯ ಪಿಜಾ ತಳಗಡೆ(ಪ್ರಥಮ), ಬಾಲಕಿಯರ ಗುಂಡು ಎಸೆತ ಸ್ಪರ್ಧೆಯಲ್ಲಿ ವಿಶ್ವಚೇತನ ಶಾಲೆಯ ಕೀರ್ತಿ ಜಾಪಾಳ (ಪ್ರಥಮ), ಬಾಲಕಿಯರ ರೀಲೆ ಓಟದ ಸ್ಪರ್ಧೆಯಲ್ಲಿ ರಾಮಥಾಳ ಸರ್ಕಾರಿ ಪ್ರಾಥಮಿಕ ಶಾಲೆ(ಪ್ರಥಮ), ಬಾಲಕರ ರೀಲೆ ಓಟದ ಸ್ಪರ್ಧೆಯಲ್ಲಿ ರಾಮಥಾಳ ಸರ್ಕಾರಿ ಪ್ರಾಥಮಿಕ ಶಾಲೆ(ಪ್ರಥಮ), 400 ಮೀಟರ್ ಓಟದಲ್ಲಿ ಕಡಿವಾಲ ಸರ್ಕಾರಿ ಪ್ರಾಥಮಿಕ ಶಾಲೆಯ ಭರಮಪ್ಪ ಗೌಡರ(ಪ್ರಥಮ), ಕಮತಗಿ ಶಾರದಾ ಶಾಲೆಯ ಸಂಜಯ ಸಿನ್ನೂರ(ದ್ವಿತೀಯ) ಸ್ಥಾನ ಪಡೆದುಕೊಂಡಿದ್ದಾರೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ವೈ.ಪಿ. ಶಾಂತರಾಜ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net