ಆನಂದಪುರದಲ್ಲಿ ಕೂಸಿನ ಮನೆಗೆ ಚಾಲನೆ

18-ANP-P1
ಆನಂದಪುರ ಸಮೀಪದ ದಾಸಕೊಪ್ಪದಲ್ಲಿ ಮೋಹನ್ ಕುಮಾರ್ ಕೂಸಿನ ಮನೆ ಉದ್ಘಾಟಿಸಿದರು. ರೂಪಾ, ಸುಶೀಲಮ್ಮ, ಗೀತಾ ಇತರರಿದ್ದರು.
Published on

ಆನಂದಪುರ: ಪಾಲಕರು ದುಡಿಮೆಗಾಗಿ ಹೋದಾಗ ಶಿಶುಗಳು ಸುರಕ್ಷಿತರಾಗಿರಬೇಕು ಎಂಬ ಉದ್ದೇಶದಿಂದ ಕೂಸಿನ ಮನೆ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ಮೋಹನ್ ಕುಮಾರ್ ತಿಳಿಸಿದರು.

ಇಲ್ಲಿನ ದಾಸಕೊಪ್ಪದಲ್ಲಿ ಕೂಸಿನ ಮನೆ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ತಂದೆ-ತಾಯಿಗಳು ಉದ್ಯೋಗ ಖಾತ್ರಿ ಇತ್ಯಾದಿ ಯೋಜನೆಯಡಿ ಕೂಲಿ ಕಾರ್ಯಕ್ಕೆ ಹೊರಗಡೆ ಹೋದಾಗ ಚಿಕ್ಕ ಕುಟುಂಬಗಳಲ್ಲಿ ಮೂರು ವರ್ಷದೊಳಗಿನ ಮಕ್ಕಳ ಪಾಲನೆ ಸಮಸ್ಯೆ ಆಗುತ್ತಿದೆ. ಮಕ್ಕಳನ್ನು ನೋಡಿಕೊಳ್ಳುವ ಆಸರೆ ಇಲ್ಲದೆ ಹಲವು ಪಾಲಕರು ದುಡಿಮೆಯನ್ನು ಕಳೆದುಕೊಂಡು ಕೊರಗುತ್ತಿದ್ದಾರೆ. ಇಂತಹವರ ನೆರವಿಗಾಗಿ ಕೇಂದ್ರ ತೆರಯಲಾಗಿದೆ ಎಂದರು.
ಆನಂದಪುರ ಗ್ರಾಪಂ ವ್ಯಾಪ್ತಿಯ ಪಾಲಕರು ದುಡಿಮೆಗೆ ಹೋದಾಗ ಚಿಕ್ಕ ಮಕ್ಳಳನ್ನು ಇಲ್ಲಿ ಬಿಟ್ಟು ಹೋಗಬಹುದು. ಆಹಾರ, ಹಾಲು, ಆಟಿಕೆ, ಜೋಲಿ, ನಿದ್ರೆ ಇತ್ಯಾದಿ ವ್ಯವಸ್ಥೆ ಇರುತ್ತದೆ. ಈ ಕೇಂದ್ರಕ್ಕೆ ಪಾಲಕರ ಸಕಾರಾತ್ಮಕ ಸ್ಪಂದನೆ ಅತಿ ಅಗತ್ಯ ಎಂದರು.
ಗ್ರಾಪಂ ಉಪಾಧ್ಯಕ್ಷೆ ರೂಪಾ ನಾಗರಾಜ್, ಸದಸ್ಯರಾದ ಗಜೇಂದ್ರ, ಸಿರಿಜಾನ್, ಮೋಹನ್ ಕುಮಾರ್ ತಾವರೆಹಳ್ಳಿ, ನವೀನಾ ರವೀಂದ್ರ, ಶಂಕರ್, ಗುರುರಾಜ್, ಸುಶೀಲಮ್ಮ, ಗೀತಾ, ಪಿಡಿಒ ಮಂಜಾ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net