ನವರಾತ್ರಿ ಉತ್ಸವಕ್ಕೆ ಚಾಲನೆ

4 vikram 9A
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ದಸರಾ ಜಂಬೂಸವಾರಿ ಉತ್ಸವ ಸಮಿತಿ ವತಿಯಿಂದ ಏರ್ಪಡಿಸಿರುವ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ವಿದ್ಯಾಗಿರಿ ಗಣೇಶ ದೇವಸ್ಥಾನದಿಂದ ಆರಂಭವಾದ ಶ್ರೀ ದುರ್ಗಾದೇವಿ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಗಾಂಧಿನಗರದ ಈಶ್ವರ ದೇವಸ್ಥಾನ ತಲುಪಿತು. ಮೆರವಣಿಗೆಯಲ್ಲಿ ಕಲಾ ವಾದ್ಯ ಮೇಳಗಳೊಂದಿಗೆ ಸಾಂಸ್ಕೃತಿಕ ಕಲಾವಿದರು ಗಮನ ಸೆಳೆದರು. ನಂತರ ದೇವಿ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಯಿತು.
ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, 20 ವರ್ಷಗಳಿಂದ ಧಾರವಾಡದಲ್ಲಿ ದಸರಾ ಜಂಬೂ ಸವಾರಿ ಉತ್ಸವ ನಡೆಸಲಾಗುತ್ತಿದೆ. ಮೈಸೂರು ಬಿಟ್ಟರೆ ಉತ್ತರ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಜಂಬೂ ಸವಾರಿ ಆರಂಭಿಸಲಾಗಿದೆ. ನಗರದ ಜನರ ಸಹಕಾರದಿಂದ ಉತ್ಸವ ಬೃಹತ್​ ಮಟ್ಟಕ್ಕೆ ಬೆಳೆದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ಸಿಕ್ಕರೆ ಮೈಸೂರು ಮಾದರಿಯಲ್ಲೇ ಉತ್ಸವ ನಡೆಸಲು ತಯಾರಿ ಮಾಡಿಕೊಳ್ಳಲಾಗುವುದು ಎಂದರು.
ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಸಮಿತಿ ಮುಖಂಡರಾದ ಮಂಜುಳಾ ಮುಂಜಿ, ವಿಲಾಸ ತಿಬೇಲಿ, ಪಿ.ಎಚ್​.ಕಿರೇಸೂರ, ನಾರಾಯಣ ಕೋಪರ್ಡೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net