ಎಂಆರ್‌ಪಿಎಲ್‌ನ ಮಾಸ್ ಟ್ರೀ ಪ್ಲಾಂಟೇಶನ್ ಡ್ರೈವ್‌ಗೆ ಚಾಲನೆ

mng_7 jun MRPL
ಪರಿಸರ ರಕ್ಷಣೆಯ ಉದ್ದೇಶದಿಂದ ಎಂಆರ್‌ಪಿಎಲ್ 2024-25ನೇ ಸಾಲಿನಲ್ಲಿ 8 ಸಾವಿರ ವೃಕ್ಷ ಬೆಳೆಸಲು ಉದ್ದೇಶಿಸಿದ್ದು, ಈ ಹಿನ್ನೆಲೆಯಲ್ಲಿ ಬೋರುಗುಡ್ಡೆ ಸರ್ಕಾರಿ ಶಾಲೆಯಲ್ಲಿ ಎಂಆರ್‌ಪಿಎಲ್ ಸಹಯೋಗದಲ್ಲಿ ವೃಕ್ಷ ಪ್ಲಾಂಟೇಶನ್ ಡ್ರೈವ್ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
Published on

ಮಂಗಳೂರು: ಪರಿಸರ ರಕ್ಷಣೆಯ ಉದ್ದೇಶದಿಂದ ಎಂಆರ್‌ಪಿಎಲ್ 2024-25ನೇ ಸಾಲಿನಲ್ಲಿ 8 ಸಾವಿರ ವೃಕ್ಷ ಬೆಳೆಸಲು ಉದ್ದೇಶಿಸಿದ್ದು, ಈ ಹಿನ್ನೆಲೆಯಲ್ಲಿ ಬೋರುಗುಡ್ಡೆ ಸರ್ಕಾರಿ ಶಾಲೆಯಲ್ಲಿ ಎಂಆರ್‌ಪಿಎಲ್ ಸಹಯೋಗದಲ್ಲಿ ಮಹತ್ವಾಕಾಂಕ್ಷೆಯ ಸಾಮೂಹಿಕ ವೃಕ್ಷ ಪ್ಲಾಂಟೇಶನ್ ಡ್ರೈವ್ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಬೋರುಗುಡ್ಡೆ ಸರ್ಕಾರಿ ಶಾಲಾ ಆವರಣದಲ್ಲಿ 200 ಸಸಿಗಳನ್ನು ನೆಡಲಾಯಿತು. ಜಗತ್ತಿನ ತಾಪಮಾನವು ಅಧಿಕವಾಗುತ್ತಿರುವ ಸಂದರ್ಭದಲ್ಲಿ ನಾವು ಜಾಗೃತರಾಗುವ ಅವಶ್ಯಕತೆಯಿದೆ. ನಾವು ನಮ್ಮ ಮನೆಯಲ್ಲಿ ಗಿಡಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಬೇಕು ಇಂದಿನ ಜಗತ್ತಿನ ಅತಿವೇಗದ ಬೆಳವಣಿಗೆಯಲ್ಲಿ, ನಾವು ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದು, ನೈಸರ್ಗಿಕ ಪರಿಸರಕ್ಕೆ ಅಭಿವೃದ್ಧಿಯೇ ಮಾರಕವೆನಿಸುವ ಮಟ್ಟಕ್ಕೆ ಜಾಗತಿಕವಾಗಿ ಮಾಲಿನ್ಯಸಮಸ್ಯೆ ಎದುರಾಗಿದೆ. ಪರಿಸರ ರಕ್ಷಿಸಿ ಬೆಳೆಸುವ ಉದ್ದೇಶದ ಅಂಗವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಗಿಡವನ್ನು ನೆಡುವುದು ಅಗತ್ಯ ಎಂದು ಮಕ್ಕಳಿಗೆ ಮಾಹಿತಿ ನೀಡಲಾಯಿತು.

ಎಂಆರ್‌ಪಿಎಲ್ ಎಚ್‌ಎಸ್‌ಸಿ ವಿಭಾಗದ ಸಿಜಿಎಂ ಸುಧರ್ಶನ್ ಎಂಎಸ್, ಮಾಲಿನ್ಯ ನಿಯಂತ್ರಣ ಮಂಡಳಿಯ ಸಿಇಒ ವಿಜಯ ಹೆಗ್ಡೆ, ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ, ಮಾಲಿನ್ಯ ನಿಯಂತ್ರಣ ಮಂಡಳಿಯ ಇಓ ಮಹೇಂದ್ರ, ಮಾಲಿನ್ಯ ನಿಯಂತ್ರಣ ಮಂಡಳಿಯ ಡಿಇಓ ಡಾ ಮಹೇಶ್ವರಿ ಸಿಂಗ್, ಡಿಇಒ ಡಾ ಮಂಜು ಆರ್ ಸಹಿತ ಎಂಆರ್‌ಪಿಎಲ್‌ನ ಇತರ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

-----------------

ಎಂಆರ್‌ಪಿಎಲ್‌ನಿಂದ ಅಳಿವಿನಂಚಿನಲ್ಲಿರುವ ಸಸ್ಯಗಳ ನಾಟಿ

ಎಂಆರ್‌ಪಿಎಲ್‌ನ ಸಾಮೂಹಿಕ ವೃಕ್ಷ ಪ್ಲಾಂಟೇಶನ್ ಡ್ರೈವ್ ಕಾರ್ಯಕ್ರಮದ ಅಂಗವಾಗಿ ಪಿಲಿಕುಳ ನರ್ಸರಿಯ ತೋಟಗಾರಿಕಾ ತಜ್ಞರ ನೆರವಿನೊಂದಿಗೆ ಎಂಆರ್‌ಪಿಎಲ್ ಬಳಿಯ ಜವುಗು ಪ್ರದೇಶದಲ್ಲಿ ಸುಮಾರು 2000 ಅಳಿವಿನಂಚಿನಲ್ಲಿರುವ ಸಸ್ಯಗಳನ್ನು ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಸ್ಥಳೀಯ ಜಾತಿಗೆ ಸೇರಿದ ಕೆಲವು ಸಸ್ಯಗಳನ್ನು ಎಂರ್‌ಪಿಎಲ್ ರಿಫೈನರಿ ಮತ್ತು ಟೌನ್‌ಶಿಪ್, ಸುತ್ತಮುತ್ತ ನಾಟಿಮಾಡುವ ಕಾರ್ಯಕ್ರಮ ಆಯೋಜಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net