

ಅರಸೀಕೆರೆ ಗ್ರಾಮಾಂತರ : ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಸ್ವರ್ಣ ಗೌರಮ್ಮ ಅವರ ವಿಗ್ರಹ ಮೂರ್ತಿ ತಯಾರು ಮಾಡುವ ಹಿನ್ನೆಲೆಯಲ್ಲಿ ಮೃತ್ತಿಕೆ ತರುವ ಸಲುವಾಗಿ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆಯಲಾಯಿತು.
ಮೂಲಸ್ಥಾನ ಶ್ರೀ ಸ್ವರ್ಣಗೌರಿ ಅಮ್ಮನವರ ಮೂರ್ತಿಯನ್ನು ಚನ್ನಬಸವೇಶ್ವರ ಚಿತ್ರಮಂದಿರ ಪಕ್ಕದ ನೂತನ ಶ್ರೀ ಗೌರಮ್ಮ ಅವರ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಮೂಲಸ್ಥಾನ ಸ್ವರ್ಣ ಗೌರಮ್ಮ ಅವರ ಸೇವಾ ಟ್ರಸ್ಟ್ ಅಧ್ಯಕ್ಷ ನಟರಾಜ್ ತಿಳಿಸಿದರು.
ಕೋಡಿಮಠದ ಉತ್ತರಾಧಿಕಾರಿಗಳಾದ ಶ್ರೀ ಚೇತನ್ ಮರಿದೇವರು, ಮುಖಂಡರಾದ ಶಿವಲಿಂಗಪ್ಪ, ಓಂಕಾರಪ್ಪ, ಸೋಮಶೇಖರ್, ಸ್ವಾಮಿ, ನಟರಾಜ್ ಇತರರು ಇದ್ದರು.