

ಮಂಡ್ಯ: ದಿವಂಗತ ನಟ ಡಾ.ಪುನೀತ್‌ರಾಜಕುಮಾರ್ ಚೈತನ್ಯದ ಚಿಲುಮೆಯಾಗಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಡೆ ಸ್ಟ್ರೈಕರ್ಸ್‌ನಿಂದ ಆಯೋಜಿಸಿರುವ ಎರಡು ದಿನದ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಪ್ಪು ನಮ್ಮನಗಲಿ 3 ವರ್ಷವಾಗುತ್ತಿದೆ. ಅಪಾರ ಅಭಿಮಾನಿಗಳು ಅವರ ಸ್ಮರಣೆಗಾಗಿ ಅನೇಕ ಸೇವಾಕಾರ್ಯ, ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದಾರೆ ಎಂದರು.
ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಸರ್‌ಎಂವಿ ಕ್ರೀಡಾಂಗಣಕ್ಕೆ ್ಲಡ್‌ಲೈಟ್ ವ್ಯವಸ್ಥೆ ಮಾಡಲು 3 ಕೋಟಿ ರೂಗಳನ್ನು ಸರ್ಕಾರ ಬಿಡುಗಡೆ ಮಾಡಲಿದೆ. ಮುಂದಿನ ದಿನಗಳಲ್ಲಿ 5 ವ್ಯಾಟ್ ಕ್ರೀಡಾಂಗಣವಾಗಲಿದೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಸಚಿವರ ಮಾಧ್ಯಮ ಸಮನ್ವಯಾಧಿಕಾರಿ ಸೋಮಶೇಖರ್ ಕೆರಗೋಡು, ಆಯೋಜಕರಾದ ರಾಕೇಶ್, ಮಧು, ಸಿರಿ, ಅಭಿ, ಯಶವಂತ್, ಮನೋಜ್, ನಂದನ್, ಸಂತೋಷ್ ಇತರರಿದ್ದರು.