ಸ್ಪರ್ಧಾತ್ಮಕ ಪರೀಕ್ಷೆ ಉಚಿತ ಶಿಬಿರಕ್ಕೆ ಚಾಲನೆ

ಚಿತ್ರ 27ಎಸ್ ಡಿ ಪಿ 2.
Published on


ಸಿದ್ದಾಪುರ : ನೆಲ್ಯಹುದಿಕೇರಿ ನೈಮ ಎಜುಕೇಷನಲ್ ಆ್ಯಂಡ್ ವೆಲ್ಫೇರ್ ಚಾರಿಟಬಲ್ ಟ್ರಸ್ಟ್‌ನಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆಯೋಜಿಸಿರುವ 10 ದಿನಗಳ ಉಚಿತ ತರಬೇತಿ ಶಿಬಿರವನ್ನು ತಾಪಂ ಇಒ ಪರಮೇಶ್ ಮಂಗಳವಾರ ಉದ್ಘಾಟಿಸಿದರು.


ಬಳಿಕ ಮಾತನಾಡಿ, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕಾದರೂ ವಿದ್ಯಾರ್ಥಿಗಳಲ್ಲಿ ತಮ್ಮದೇ ಆದ ಆತ್ಮ ಸ್ಥೈರ್ಯ ಮತ್ತು ಶ್ರಮವಿರಬೇಕು. ಅದರ ಜತೆಗೆ ಇಂತಹ ಸಂಸ್ಥೆಗಳು ನೀಡುತ್ತಿರುವ ತರಬೇತಿಯ ಲಾಭ ಪಡೆದುಕೊಂಡರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ನ್ಯಾಯಾಧೀಶ ಶೆಫೀರ್ ಮಾತನಾಡಿ, ಸ್ವಾಭಿಮಾನದ ಬದುಕಿಗೆ ಶಿಕ್ಷಣ ಅತ್ಯಗತ್ಯವಾಗಿದ್ದು, ಕೇವಲ ಶಿಕ್ಷಣದಿಂದ ಮಾತ್ರ ಗುರಿ ಸಾಧಿಸಲು ಸಾಧ್ಯವಿಲ್ಲ. ಶಿಕ್ಷಣದ ಜತೆಗೆ ತಮ್ಮ ಕೌಶಲ್ಯವನ್ನು ಕೂಡ ಹೊರ ಹಾಕಿದಾಗ ಗುರಿಯಡೆಗೆ ಸಾಗಲು ಸಹಕಾರಿಯಾಗಲಿದೆ ಎಂದರು.


ಸಹಾಯಕ ಪ್ರಾಧ್ಯಾಪಕ ನೌಶಾದ್ ಮಾತನಾಡಿ, ನೈಮ ಸಂಸ್ಥೆಯು ಜಿಲ್ಲೆಯಲ್ಲಿಯೇ ಮಾದರಿ ಸಂಸ್ಥೆಯಾಗಿದ್ದು, ಕೊಡಗು ಜಿಲ್ಲೆಯಲ್ಲಿನ ವಿದ್ಯಾರ್ಥಿಗಳು ಉನ್ನತ ಹುದ್ದೆಯಿಂದ ವಂಚಿತರಾಗುವುದನ್ನು ಮನಗಂಡು, ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ನಿರ್ಮಿಸುವ ನಿರ್ಧಾರ ಮಾಡಿರುವುದು ಶ್ಲಾಘನೀಯ. ವಿದ್ಯಾರ್ಥಿಗಳಿಗೆ ಬೇಕಾದ ಕೋಚಿಂಗ್, ಟ್ರೈನಿಂಗ್, ಕೌನ್ಸಲಿಂಗ್ ಮತ್ತು ಗೈಡನ್ಸ್ ಕೊಡುವ ಮೂಲಕ ಐಎಎಸ್, ಐಪಿಎಸ್ ಮುಂತಾದ ಉನ್ನತ ಹುದ್ದೆಗೆ ಬೇಕಾದ ವಿದ್ಯಾರ್ಥಿಗಳನ್ನು ರೂಪಿಸುವ ಮಹತ್ವದ ಗುರಿ ಹೊಂದಿದೆ ಎಂದರು.


ಕಾರ್ಯಕ್ರಮದಲ್ಲಿ ನೆಲ್ಯಹುದುಕೇರಿ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಶಂಶುಲ್ ಉಲಮಾ ಎಜುಕೇಶನ್ ಟ್ರಸ್ಟ್ ಮುಖ್ಯಸ್ಥ ಸಿಪಿಎಂ ಬಶೀರ್ ಹಾಜಿ, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಯಾಕೂಬ್ ಬಜೆಗುಂಡಿ, ಕುಶಾಲನಗರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿ.ಎಸ್ ಸಜಿ, ಹೊದ್ದೂರು ಗ್ರಾಪಂ ಪಿಡಿಒ ಅಬ್ದುಲ್ಲ, ನೆಲ್ಯಹುದಿಕೇರಿ ಪಿಡಿಒ ನಂಜುಂಡ ಸ್ವಾಮಿ ಮತ್ತು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net