

ಬೈಂದೂರು: ಕುಟುಂಬದ ಕೇಂದ್ರಬಿಂದುವಾಗಿರುವ ಮಹಿಳೆಗೆ ಸೂಕ್ತ ಸ್ಥಾನಮಾನ, ಗೌರವದ ಜತೆಗೆ ಪೂಜ್ಯ ಭಾವನೆಯಿಂದ ಕಾಣುವ ಸಂಸ್ಕೃತಿ ನಮ್ಮದು. ಬಲಿಷ್ಠ ಮಹಿಳಾ ಸಮಾಜವನ್ನು ಪ್ರೇರಿಪಿಸಿದ್ದಲ್ಲಿ ಸ್ತ್ರೀಕುಲದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಬೈಂದೂರು ಗಾಣಿಗ ಸೇವಾ ಟ್ರಸ್ಟ್ ಅಧ್ಯಕ್ಷ ಕೊಲ್ಲೂರು ರಮೇಶ ಗಾಣಿಗ ಹೇಳಿದರು.
ಬೈಂದೂರು ಗಾಣಿಗ ಸೇವಾ ಟ್ರಸ್ಟ್ ವತಿಯಿಂದ ಶುಕ್ರವಾರ ಎರಡನೇ ತಂಡದ ಹೊಲಿಗೆ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.
ಟ್ರಸ್ಟ್ ಕಾರ್ಯದರ್ಶಿ ನಾಗರಾಜ ಗಾಣಿಗ ಬಂಕೇಶ್ವರ, ಕೋಶಾಧಿಕಾರಿ ಆನಂದ ಗಾಣಿಗ, ಟ್ರಸ್ಟ್ ಪ್ರೇಮಾ ಗಾಣಿಗ, ಪ್ರಶಾಂತ್, ತರಬೇತುದಾರ ಸುಬ್ಬಣ್ಣ ಗಾಣಿಗ ಉಪಸ್ಥಿತರಿದ್ದರು. ಟ್ರಸ್ಟಿ ಶಿವಾನಂದ ಗಾಣಿಗ ನಿರ್ವಹಿಸಿದರು.