

ನರಗುಂದ: ಜನನ ಮತ್ತು ಮರಣ ನೋಂದಣಿಗಾಗಿ ಪಟ್ಟಣಕ್ಕೆ ಅಲೆದಾಡುವ ಬದಲು ತಾಲೂಕಿನ 13 ಗ್ರಾಪಂಗಳಲ್ಲಿಯೇ ಉಪನೋಂದಣಿ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಪಂ ಇಒ ಎಸ್.ಕೆ. ಇನಾಮದಾರ ಹೇಳಿದರು. ತಾಲೂಕಿನ ಕೊಣ್ಣೂರ ಗ್ರಾಪಂ ಕಚೇರಿಯಲ್ಲಿ ಮಂಗಳವಾರ ಜನನ, ಮರಣ ನೋಂದಣಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿ, ಸಾರ್ವಜನಿಕರ ಮಾಹಿತಿಗಾಗಿ ಗ್ರಾಪಂ ಕಚೇರಿ ಮುಂಭಾಗದಲ್ಲಿ ನಾಮಫಲಕ ಅಳವಡಿಸಲಾಗಿದೆ ಎಂದರು. ಅಧ್ಯಕ್ಷತೆಯನ್ನು ಕೊಣ್ಣೂರು ಗ್ರಾಪಂ ಅಧ್ಯಕ್ಷೆ ಸಿದ್ದವ್ವ ಬಸವರಾಜ ಕಳಸಣ್ಣವರ ವಹಿಸಿದ್ದರು, ಕೊಣ್ಣೂರು ಗ್ರಾಪಂ ಉಪಾಧ್ಯಕ್ಷ ಸಂಕನಗೌಡ ಪಾಟೀಲ ಇದ್ದರು.