

ಮುದ್ದೇಬಿಹಾಳ: ತಾಲೂಕಿನ ಸರೂರ ಗ್ರಾಮದ ಆದಿ ಜಗದ್ಗುರು ಶ್ರೀ ರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಗುರುವಾರದಿಂದ ಚಾಲನೆ ದೊರಕಿದ್ದು ಸೆ. 4ರವರೆಗೂ ವಿಜಂಭಣೆಯಿಂದ ನಡೆಯಲಿದೆ.
ಸೆ. 1ರಂದು ಸಂಜೆ 4ಕ್ಕೆ ರೇವಣಸಿದ್ಧೇಶ್ವರ ಪಲ್ಲಕ್ಕಿ ಉತ್ಸವದೊಂದಿಗೆ ತಂಗಡಗಿ ಗ್ರಾಮದ ಹತ್ತಿರ ಕಷ್ಣಾ ನದಿಗೆ ಗಂಗಸ್ಥಳಕ್ಕೆ ಹೋಗಿ ಬರುವುದು. ರಾತ್ರಿ 9ರಿಂದ ಬೆಳಗಿನವರೆಗೆ ಅಹೋರಾತ್ರಿ ಶಿವಭಜನೆ ನಡೆಯಲಿದೆ.
2ರಂದು ಬೆಳಗ್ಗೆ 8ಕ್ಕೆ ಭಜನಾ ಮೆರವಣಿಗೆ, 9ಕ್ಕೆ ದಾವಣಗೆರೆಯ ಸದ್ಭಕ್ತರು ಕೊಡುಗೆ ನೀಡಿದ ರೇವಣಸಿದ್ಧೇಶ್ವರ ಬೆಳ್ಳಿ ಮೂರ್ತಿ ಉತ್ಸವ, ಗಂಗಸ್ಥಳ ನಡೆಯಲಿದೆ. ಕಳಸದ ಮೆರವಣಿಗೆ, ಕಳಸಾರೋಹಣ ನಂತರ ಸಂಜೆ 4ಕ್ಕೆ ಶಾಂತಮುತ್ತಯ್ಯನವರ ಮೂಲ ಗುರುಪೀಠದಿಂದ ಬೆಳ್ಳಿಮೂರ್ತಿ, ಪಲ್ಲಕ್ಕಿ ಮೆರವಣಿಗೆ ವಿಶೇಷ ವಾದ್ಯ ವೆಭವಗಳೊಂದಿಗೆ ಊರೊಳಗಿನ ಗಚ್ಚಿನ ಗುಡಿ ರೇವಣಸಿದ್ಧೇಶ್ವರ ದೇವಸ್ಥಾನಕ್ಕೆ ತಲುಪುತ್ತದೆ. ಸಂಜೆ 7ಕ್ಕೆ ರೇವಣಸಿದ್ಧೇಶ್ವರರ ಜೋಡು ಪಲ್ಲಕ್ಕಿ ಉತ್ಸವ, ಮಧ್ಯರಾತ್ರಿ 1ಕ್ಕೆ ರೇವಣಸಿದ್ಧೇಶ್ವರ ಹಿರೇಗುಡ್ಡದಲ್ಲಿ ಶಿವವಾಣಿ ಹೇಳಿಕೆಗಳು ನಡೆಯಲಿದ್ದು ತದನಂತರ ಚಿತ್ತಾಕಾರದ ಮದ್ದು ಸುಡುವಿಕೆ ಇರುತ್ತದೆ. ಅದಾದ ಮೇಲೆ ಪಲ್ಲಕ್ಕಿಯನ್ನು ಮರಳಿ ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ.
3 ರಂದು ವಿವಿಧ ಶಕ್ತಿ ಪ್ರದರ್ಶನದ ಚಟುವಟಿಕೆಗಳು ನೆರವೇರಲಿವೆ. ರಾತ್ರಿ 10ಕ್ಕೆ ನಾಟಕ ಪ್ರದರ್ಶನ ಇದೆ. 4 ರಂದು ವಿವಿಧ ದೆಹಿಕ, ಬುದ್ಧಿಶಕ್ತಿಯ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸರೂರು ಹಾಲುಮತ ಮೂಲ ಗುರುಪೀಠ, ಅಗತೀರ್ಥ ಶಾಖಾ ಮಠದ ಪೂಜ್ಯರಾದ ರೇವಣಸಿದ್ಧೇಶ್ವರ ಶಾಂತಮಯ ಸ್ವಾಮೀಜಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.