ಕಾಡಾನೆಗಳನ್ನು ಮರಳಿ ಕಾಡಿಗೆ ಓಡಿಸಿ

ald 1
Published on

ಆಲ್ದೂರು: ಆನೆಗಳ ಗುಂಪಿನಿಂದ ಬೇರ್ಪಟ್ಟ ಮೂರು ಆನೆಗಳು ಆಲ್ದೂರು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಓಡಾಡುತ್ತಿದ್ದು, ಅವುಗಳನ್ನು ಕೂಡಲೇ ಕಾಡಿಗೆ ಓಡಿಸಬೇಕು ಎಂದು ಆಗ್ರಹಿಸಿ ಹವ್ವಳ್ಳಿ, ಇಳೇಖಾನ್, ಕಠಾರದಹಳ್ಳಿ, ಗುಡ್ಡದೂರು ಗ್ರಾಮಸ್ಥರು ಆಲ್ದೂರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಕಲೇಶಪುರ ಭಾಗದಿಂದ ಸುಮಾರು 20ಅನೆಗಳು ಮಲೆನಾಡು ಭಾಗಕ್ಕೆ ಬಂದಿವೆ. ಅದರಲ್ಲಿ ಮೂರು ಆನೆಗಳು ಗುಂಪಿನಿಂದ ಬೇರ್ಪಟ್ಟು ಜನರ ಮೇಲೆ ದಾಳಿ ಮಾಡುತ್ತಾ ಬೆಳೆ ಹಾಳು ಮಾಡುತ್ತಿವೆ. ಗುಡ್ಡದೂರು ಹಾಗೂ ಹವ್ವಳ್ಳಿ ಗ್ರಾಮದಲ್ಲಿ ಇಬ್ಬರ ಜನರ ಮೇಲೆ ದಾಳಿ ಮಾಡಿದ್ದು, ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆನೆಗಳ ಕಾಟದಿಂದ ಬೇಸತ್ತು ಹೋಗಿದ್ದೇವೆ ಎಂದು ಗ್ರಾಮಸ್ಥರು ಇಲಾಖೆ ಎದುರು ತಮ್ಮ ಆಕ್ರೋಶ ಹೊರ ಹಾಕಿದರು.

ತಾಪಂ ಮಾಜಿ ಸದಸ್ಯ ಜಿ.ಯು.ರಘು, ಆಲ್ದೂರು ಗ್ರಾಪಂ ಸದಸ್ಯೆ ಪ್ರತಿಭಾ ನವೀನ್ , ಮಾಜಿ ಸದಸ್ಯ ಶಿವಕುಮಾರ್, ರಘು, ಗಂಗಾಧರಯ್ಯ, ವಿವೇಕ್, ರಾಜೇಂದ್ರ, ರವಿ,ಆಶಿತ್, ವಿಜಯ್, ರಂಜಿತ್, ಮೊಹಮದ್ ರಫಿ , ಆಲ್ದೂರು, ಹವ್ವಳ್ಳಿ, ಗುಡ್ಡದೂರು, ಕಠಾರದಹಳ್ಳಿ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net