ಕೂವೆ ಗ್ರಾಪಂನಿಂದ ಆನೆಗಳನ್ನು ಓಡಿಸಿ

kls manavi
ಹಾದಿಓಣಿ ಮತ್ತು ಕೂವೆ ಗ್ರಾಮಸ್ಥರು ಕಳಸ ವಲಯ ಸಂರಕ್ಷಣಾಧಿಕಾರಿ ನಿಶ್ಚಿತ್‌ಗೆ ಮನವಿ ಸಲ್ಲಿಸಿದರು. ಅಶೋಕ, ಕವೀಶ್, ದಿವೀಶ್, ಗಣಪತಿ, ಸಚಿನ್, ಚಂದ್ರು ಇತರರಿದ್ದರು.
Published on

ಳಸ: ಗ್ರಾಮದಲ್ಲಿ ಆನೆಗಳ ಉಪಟಳದಿಂದ ಬೆಳೆಗಳು ಹಾನಿಯಾಗಿವೆ. ಕಾಡಿನಿಂದ ನಾಡಿಗೆ ಬಂದಿರುವ ಆನೆಗಳನ್ನು ಓಡಿಸಬೇಕು ಎಂದು ಒತ್ತಾಯಿಸಿ ಹಾದಿಓಣಿ ಮತ್ತು ಕೂವೆ ಗ್ರಾಮಸ್ಥರು ಕಳಸ ವಲಯ ಸಂರಕ್ಷಣಾಧಿಕಾರಿ ನಿಶ್ಚಿತ್ ಅವರಿಗೆ ಮನವಿ ಸಲ್ಲಿಸಿದರು.

ಕೂವೆ ಗ್ರಾಪಂ ಹಾದಿಓಣಿ, ಅಮ್ತಿ, ಕೆಳಮನೆ, ಕೂಡ್ಲಿ, ಆಚಾರ್ ಪಾಲ್, ಧನ್ನಕ್ಕಿ, ಹೊಳೆಕುಡಿಗೆ, ನಿಡ್ನಳ್ಳಿ ಭಾಗದಲ್ಲಿ ಒಂದು ತಿಂಗಳಿನಿಂದ ಎರಡು ಕಾಡಾನೆಗಳು ಬೀಡುಬಿಟ್ಟು ಅಡಕೆ, ಕಾಫಿ, ಕಾಳುಮೆಣಸು, ಬಾಳೆ ಇತರ ಬೆಳೆಗಳನ್ನು ನಾಶಗೊಳಿಸುತ್ತಿವೆ. ರೈತರು ಜೀವ ಭಯದಲ್ಲಿ ಕೆಲಸ ಮಾಡುವಂತಾಗಿದೆ. ರಸ್ತೆಯಲ್ಲಿ ಸಂಚರಿಸಲು ಜನ ಹೆದರುತ್ತಿದ್ದಾರೆ. ಹಾಗಾಗಿ ಕಾಡಾನೆಗಳನ್ನು ಸ್ಥಳಾಂತರಿಸಬೇಕು ಹಾಗೂ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿ ಕಳಸ ಆರ್‌ಎಫ್‌ಒ ನಿಶ್ಚಿತ್ ಮಾತನಾಡಿ, ಮಳೆ ಇರುವ ಪರಿಣಾಮ ಹೊಳೆಯಲ್ಲಿ ಹೆಚ್ಚು ನೀರು ಇರುವುದರಿಂದ ಆನೆ ಓಡಿಸಲು ಸಾಧ್ಯವಾಗಲಿಲ್ಲ. ನೀರು ಸ್ವಲ್ಪ ಕ್ಷೀಣಿಸಿದ ಕೂಡಲೇ ಆನೆಗಳನ್ನು ಓಡಿಸಲಾಗುವುದು ಎಂದು ಹೇಳಿದರು.
ಗ್ರಾಮಸ್ಥರಾದ ಅಶೋಕ, ಕವೀಶ್, ಕೃಷ್ಣೇಗೌಡ, ದಿವೀಶ್, ಪ್ರದೀಪ, ನಾಗೇಶ ಗೌಡ, ಗಣಪತಿ, ದಿನೇಶ ಆಚಾರ್ಯ, ಪ್ರಶಾಂತ್, ದಿನೇಶ್ ಗೌಡ, ಸಚಿನ್, ಚಂದ್ರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net