ಇಳಕಲ್ಲ & ಮುದ್ದೇಬಿಹಾಳ ಮಾರ್ಗದಲ್ಲಿ ಬಸ್​ ಓಡಿಸಿ

Drive the bus on the Ilakalla & Muddebihala route.
ಮುದ್ದೇಬಿಹಾಳ ಬಸ್​ ಟಕ ವ್ಯವಸ್ಥಾಪಕ ಎ.ಎಚ್​.ಮದಭಾವಿ ಅವರೊಂದಿಗೆ ಶಾಂತಗೌಡ ಪಾಟೀಲ ನಡಹಳ್ಳಿ ಚರ್ಚಿಸಿದರು. ಹುಲಗಪ್ಪ ನಾಯಕಮಕ್ಕಳ, ತಿಪ್ಪಣ್ಣ ದೊಡಮನಿ, ಶಂಕರಗೌಡ ಪಾಟೀಲ ಇನ್ನಿತರರು ಇದ್ದಾರೆ.
Published on

ಮುದ್ದೇಬಿಹಾಳ: ನೌಕರರು, ವಿದ್ಯಾರ್ಥಿಗಳು ಸಂಚರಿಸಲು ಅನುವಾಗುವಂತೆ ಇಳಕಲ್ಲ ಬಸ್​ ನಿಲ್ದಾಣದಿಂದ ಮುದ್ದೇಬಿಹಾಳಕ್ಕೆ ಬರುವ ಬಸ್​ ಅನ್ನು ಮೊದಲಿನಂತೆ ಸಮಯಕ್ಕೆ ಸರಿಯಾಗಿ ಓಡಿಸಲು ಕ್ರಮ ಕೈಕೊಳ್ಳಲಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಟಕ ವ್ಯವಸ್ಥಾಪಕ ಎ.ಎಚ್​.ಮದಭಾವಿ ಅವರು ಶುಕ್ರವಾರ ಟಕದ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ನೇತೃತ್ವದ ತಂಡಕ್ಕೆ ಭರವಸೆ ನೀಡಿದರು.

ಮುದ್ದೇಬಿಹಾಳ ಟಕದ ಬಸ್​ ಇಳಕಲ್ಲ ಬಸ್​ ನಿಲ್ದಾಣದಿಂದ ನಿತ್ಯವೂ ಸಂಜೆ 4.15ಕ್ಕೆ ಬಿಡುತ್ತಿತ್ತು. ಇದು ಮುದ್ದೇಬಿಹಾಳವರೆಗೂ ಇರುವ ಗ್ರಾಮಗಳ ನೌಕರರು, ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕರವಾಗಿತ್ತು. ಇಳಕಲ್​ನಿಂದ ಮುದ್ದೇಬಿಹಾಳ ಮಾರ್ಗವಾಗಿ ತಾಳಿಕೋಟೆವರೆಗೂ ಹೋಗಿ ಬರುತ್ತಿದ್ದ ಈ ಬಸ್ಸನ್ನು ಏಕಾಏಕಿ ಬಂದ್​ ಮಾಡಿರುವುದು ಸಮಸ್ಯೆಗೆ ಕಾರಣವಾಗಿದೆ.

ಈ ಬಗ್ಗೆ ಎರಡು ಬಾರಿ ನೌಕರರು, ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದರು. ಆದರೂ ಏಕೆ ಸ್ಪಂದಿಸಲಿಲ್ಲ ಎಂದು ಪ್ರಶ್ನಿಸಿದ ಶಾಂತಗೌಡರು, ಸಿಬ್ಬಂದಿ ಅಥವಾ ಬಸ್​ಗಳ ಕೊರತೆ ಇದ್ದರೆ ಅದರ ಮಾಹಿತಿಯನ್ನು ತಮಗೆ ನೀಡಿದಲ್ಲಿ ಸಂಬಂಧಿಸಿದವರನ್ನು ಸಂಪರ್ಕಿಸಿ ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಆ ಬಸ್​ ನಿಯಮಿತವಾಗಿ ಓಡಿಸಲಾಗುತ್ತಿತ್ತು. ಸಿಬ್ಬಂದಿ ಕೊರತೆ ಸೇರಿ ಹಲವು ಕಾರಣಗಳಿಂದಾಗಿ ಸಮಸ್ಯೆ ಆಗಿದೆ. ಎಲ್ಲ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮೊದಲಿನಂತೆ ಇಳಕಲ್​ನಿಂದ ನಿತ್ಯ ಸಂಜೆ 4.15ಕ್ಕೆ ಮುದ್ದೇಬಿಹಾಳ, ತಾಳಿಕೋಟೆವರೆಗೂ ಬಸ್​ ಓಡಿಸಲು ಅಗತ್ಯ ಕ್ರಮ ಕೈಕೊಳ್ಳುವುದಾಗಿ ಹೇಳಿದ ನಂತರ ಎಲ್ಲರೂ ನಿರ್ಗಮಿಸಿದರು.

ಹುಲಗಪ್ಪ ನಾಯಕಮಕ್ಕಳ, ತಿಪ್ಪಣ್ಣ ದೊಡಮನಿ, ಶಂಕರಗೌಡ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net