ಕರ್ಜೆಯಲ್ಲಿ ಸ್ಕಿನ್ ಕೇರ್ ತರಬೇತಿಗೆ ಚಾಲನೆ

skin care
ಕರ್ಜೆ ಗ್ರಾಪಂ ಸಭಾಂಗಣದಲ್ಲಿ ಸ್ಕಿನ್ ಕೇರ್ ಸಂಬಂಧಿತ ತರಬೇತಿ ಶಿಬಿರವನ್ನು ವಿಶ್ವನಾಥ ಶೆಟ್ಟಿ ಉದ್ಘಾಟಿಸಿದರು
Published on

ಕೊಕ್ಕರ್ಣೆ: ಮಂಗಳೂರಿನ ವಿಜಯ ಗ್ರಾಮೀಣ ಪ್ರತಿಷ್ಠಾನ, ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ತಾಲೂಕು ಎನ್‌ಆರ್‌ಎಲ್‌ಎಂ, ಕರ್ಜೆ ಸೌಹಾರ್ದ ಸಂಜೀವಿನಿ ಒಕ್ಕೂಟ, ಕರ್ಜೆ ಗ್ರಾ.ಪಂ. ಸಹಯೋಗದಲ್ಲಿ ಸ್ಕಿನ್ ಕೇರ್ ಸಂಬಂಧಿತ ವಿವಿಧ ಬಗೆಯ ಸೋಪ್, ಫಿನಾಯಿಲ್ ಪ್ರಾಡಕ್ಟ್‌ನ ಐದು ದಿನಗಳ ತರಬೇತಿ ಕಾರ್ಯಕ್ರಮವನ್ನು ವಿಜಯ ಗ್ರಾಮೀಣ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಶೆಟ್ಟಿ ಉದ್ಘಾಟಿಸಿದರು.
ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಮಲಾ ಅಧ್ಯಕ್ಷತೆ ವಹಿಸಿದ್ದರು.ಬ್ಯಾಂಕ್ ಆಫ್ ಬರೋಡಾ ಬ್ರಹ್ಮಾವರ ಶಾಖೆಯ ಮ್ಯಾನೇಜರ್ ಸಖರಾಮ್ ಭಂಡಾರ್ಕರ್, ಎನ್‌ಆರ್‌ಎಲ್‌ಎಂ ವಲಯ ಮೇಲ್ವಿಚಾರಕಿ ಸ್ವಾತಿ, ತರಬೇತುದಾರೆ ಕವಿತಾ ಉಪಸ್ಥಿತರಿದ್ದರು. 30 ಮಂದಿ ಸ್ವ ಸಹಾಯ ಸಂಘಗಳ ಸದಸ್ಯರು ತರಬೇತಿಯಲ್ಲಿ ಭಾಗವಹಿಸಿದ್ದಾರೆ.

ಎಂಬಿಕೆ ವಿನೋದಾ ಸ್ವಾಗತಿಸಿದರು. ಬಿವಿಟಿಯ ರಾಘವೇಂದ್ರ ಆಚಾರ್ಯ ಕೆದೂರು ಪ್ರಸ್ತಾವನೆಗೈದರು. ಸವಿತಾ ನಿರೂಪಿಸಿದರು. ವಿಜಯ ಗ್ರಾಮೀಣ ಪ್ರತಿಷ್ಠಾನದ ಸಿಬಂದಿ ಕಾರ್ತಿಕ್ ಸಹಿತ ಹಲವರು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net