

ಸೋಮವಾರಪೇಟೆ: ತಾಲೂಕಿನ ನೇರುಗಳಲೆ ಸರ್ಕಾರಿ ಶಾಲೆಯಲ್ಲಿ ಆರಂಭಗೊಂಡಿರುವ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳ ಅನುಕೂಲಕ್ಕೆ ಬಸ್ ಸೇವೆಗೆ ಸೋಮವಾರ ಚಾಲನೆ ನೀಡಲಾಯಿತು.
ಶಾಲೆಗೆ ಸುತ್ತಮುತ್ತಲ ಗ್ರಾಮೀಣ ಪ್ರದೇಶದಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ಇದ್ದರಿಂದ ಸಮಸ್ಯೆಯಾಗಿತ್ತು. ಇದನ್ನು ಮನಗಂಡ ಶಾಲಾ ಸಮಿತಿಯವರು 4ಲಕ್ಷ ರೂ. ವೆಚ್ಚದಲ್ಲಿ ಮಿನಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಮಿತಿ ಅಧ್ಯಕ್ಷ ಬೋಜೇಗೌಡ, ಗೌರವ ಸಲಹೆಗಾರ ಎಸ್.ಎಂ.ಡಿಸಿಲ್ವಾ, ವಿ.ಎಂ.ವಿಜಯ, ವಿ.ಎಂ.ಶಿವದಾಸ್, ವಿನೋದ್‌ಕುಮಾರ್, ನಿರ್ದೇಶಕರಾದ ಗಿರೀಶ್ ಮಲ್ಲಪ್ಪ, ಕೆ.ಆರ್.ಕಿರಣ್, ಎ.ಜಿ.ಅಜಿತ್, ಕಾರ್ಯದರ್ಶಿ ಸಂಭ್ರಮ್, ಖಜಾಂಚಿ ಎ.ಎಚ್.ತಿಮ್ಮಯ್ಯ, ಉಪಾಧ್ಯಕ್ಷರಾದ ಪುಷ್ಪಾವತಿ, ಶೈಲಾ, ಪಿಡಿಒ ಗಣೇಶ್ ಸೇರಿದಂತೆ ಸಮಿತಿ ಪದಾಧಿಕಾರಿಗಳು ಇದ್ದರು.