ಬೀದಿ ದೀಪಗಳ ನವೀಕರಣಕ್ಕೆ ಚಾಲನೆ

Drive for renovation of street lights
Drive for renovation of street lights
Published on

ಹುನಗುಂದ: ಪಟ್ಟಣದ ಪುರಸಭೆ ವ್ಯಾಪ್ತಿಯ ರಾಯಚೂರು ಬಾಚಿ ರಾಜ್ಯ ಹೆದ್ದಾರಿ 20ರ ಮಧ್ಯದ ಡಿವೈಡರ್‌ನಲ್ಲಿ ಬೀದಿ ದೀಪಗಳ ನವೀಕರಣ ಮತ್ತು ಹೊಸ ಕಂಬಗಳ ಅಳವಡಿಕೆ ಕಾಮಗಾರಿಗೆ ಶುಕ್ರವಾರ ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.

ಸಾರ್ವಜನಿಕರ ಬಹುದಿನದ ಬೇಡಿಕೆಯಾಗಿದ್ದ ಪಟ್ಟಣದ ಕೋರ್ಟ್‌ನಿಂದ ನಾಗರಾಳ ಪೆಟ್ರೋಲ್ ಬಂಕ್ ವರೆಗಿನ ರಾಜ್ಯ ಹೆದ್ದಾರಿ ಮಧ್ಯದಲ್ಲಿ ಅಳವಡಿಸಲಾಗಿದ್ದ ಬೀದಿ ದೀಪಗಳು ದುರಸ್ತಿಗೊಂಡಿವೆ. ಈಗ 48 ಲಕ್ಷ ರೂ. ಎಸ್‌ಎ್ಸಿ ಅನುದಾನದಲ್ಲಿ ಬೀದಿ ದೀಪ ನವೀಕರಣ ಮತ್ತು ಹೊಸ ವಿದ್ಯುತ್ ಕಂಬಗಳ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಗುತ್ತಿಗೆದಾರರು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದು ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ ಹೇಳಿದರು.

ಪುರಸಭೆ ಉಪಾಧ್ಯಕ್ಷೆ ರಾಜಮ್ಮ ಬಾದಾಮಿ, ಸದಸ್ಯರಾದ ಬಸವರಾಜ ಗೊನ್ನಾಗರ, ಚಂದ್ರು ತಳವಾರ, ಯಲ್ಲಪ್ಪ ನಡುವಿನಮನಿ, ಶಾಂತ ಮೇಲಿನಮನಿ, ನಾಮ ನಿರ್ದೇಶಕ ಸದಸ್ಯ ಮಲ್ಲಣ್ಣ ಅಂಟರತಾನಿ, ಮುಖಂಡರಾದ ವಿಶ್ವನಾಥ ಬ್ಯಾಳಿ, ಶಾಂತಯ್ಯ ಮಠ, ಹರ್ಷದ ನಾಯಕ, ಮಹಾಂತೇಶ ಚಿತ್ತವಾಡಗಿ, ಸುರೇಶ ಹಳಪೇಟಿ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಮುತ್ತುರಾಜ ಕಳ್ಳಿಗುಡ್ಡ ಇಂಜಿನಿಯರಾದ ಜಿ.ಎಲ್. ಬಂಡಿವಡ್ಡರ, ವೀರಭದ್ರಪ್ಪ ಕೊಟಗಿ, ಸಿಬ್ಬಂದಿ ಮಹಾಂತೇಶ ತಾರಿವಾಳ, ಬಾಬು ಲೈನ, ಮಹಮ್ಮದ್ ತಗ್ಗಿನಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net