‘ಪಾನಮುಕ್ತರ ಸಮಾವೇಶ’ಕ್ಕೆ ಚಾಲನೆ

drinks
Published on

ಮೈಸೂರು: ಗಾಂಧಿ ಜಯಂತಿ ಅಂಗವಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಕೇರ್ಗಳ್ಳಿಯ ಹೊಂಬಾಳಮ್ಮ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿರುವ ‘ಪಾನಮುಕ್ತರ ಸಮಾವೇಶ’ಕ್ಕೆ ಶಾಸಕ ಶ್ರೀವತ್ಸ ಚಾಲನೆ ನೀಡಿದರು.


ಮದ್ಯಪಾನ, ಧೂಮಪಾನ, ಮಾದಕ ವಸ್ತು ಸೇವನೆ ನೇಣಿಗೆ ಕೊರಳೊಡ್ಡಿದಂತೆ. ದೇಹ, ಮನಸ್ಸು ಎರಡನ್ನೂ ಸುಟ್ಟು, ಕುಟುಂಬದ, ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕುಡಿತದಿಂದ ಚಟದಿಂದ ಎಲ್ಲರೂ ಮುಕ್ತರಾಗಬೇಕು ಎಂದರು.


ಮೇಯರ್ ಶಿವಕುಮಾರ್, ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್, ಬಿ.ಸಿ. ಟ್ರಸ್ಟ್ನ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ, ಮುಖಂಡರಾದ ಕೆ.ಎಂ.ಪ್ರಭುಸ್ವಾಮಿ, ಎಂ.ಎ.ಕಮಲಾ, ವರದರಾಜ್, ಸೋಮಶೇಖರ್, ಕಿರಗಸೂರು ಶಂಕರ್, ನಾರಾಯಣ್ ಇತರರಿದ್ದರು.


15 ರವರೆಗೆ ಮದ್ಯವರ್ಜನ ಶಿಬಿರ, ಜಾಗೃತಿ ಮತ್ತು ಪ್ರಚಾರ ಕಾರ್ಯಕ್ರಮ, ಸ್ವಾಸ್ಥೃ ಸಂಕುಲ ಕಾರ್ಯಕ್ರಮ, ಮಾದಕವಸ್ತುಗಳ ತಡೆಗಟ್ಟುವಿಕೆ, ನವಜೀವನ ಸಮಿತಿ ರಚನೆ ಮೊದಲಾದ ಕಾರ್ಯಕ್ರಮ ನಡೆಯಲಿವೆ. ಈ ಮೂಲಕ ಲಕ್ಷಕ್ಕೂ ಹೆಚ್ಚು ಮದ್ಯವ್ಯಸನಿಗಳನ್ನು ವ್ಯಸನಮುಕ್ತರನ್ನಾಗಿಸಲು ಶ್ರಮಿಸಲು ಕಾರ್ಯಕ್ರಮ ರೂಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net