

ಯರಗಟ್ಟಿ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ, ಮಕ್ಕಳ ವಿಶೇಷ ಆರೈಕೆಗಾಗಿ 13 ಕೋಟಿ ರೂ.ಗಳಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಕಾರ್ಯಕ್ಕೆ ಶ್ರೀ ಚಾಲನೆ ನೀಡಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಇಲ್ಲಿನ ಬಸವೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಹೆಚ್ಚುವರಿ ಶಾಲಾ ಕೊಠಡಿ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ಶಿಣ ಮತ್ತು ಆರೋಗ್ಯ ೇತ್ರಕ್ಕೆ ಪ್ರಾಮುಖ್ಯತೆ ನೀಡಿದ್ದು, ಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡಲಾಗುವುದು. ವಿಧಾನ ಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಯ 10 ಲ ರೂ. ಅನುದಾನದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು ಎಂದರು.
ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಮಕ್ಕಳು ಶಿಕರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಬೇಕು ಎಂದರು.
ಎಪಿಎಂಸಿ ಅಧ್ಯ ನೀಲಕಂಠ ನಿದ್ಧಬಸನ್ನವರ, ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಪಪಂ ನಾಮನಿರ್ದೇಶನ ಸದಸ್ಯರಾದ ನಿಖಿಲ ಪಾಟೀಲ, ಹನುಮಂತ ಹಾರೂಗೊಪ್ಪ, ಸಲೀಂ ಜಮಾದಾರ, ರಮೇಶ ದೇವರಡ್ಡಿ, ಮಂಜುನಾಥ ತಡಸಲೂರ, ಪಿ.ಎಚ್.ಪಾಟೀಲ, ವಿಠ್ಠಲ ದೇವರಡ್ಡಿ, ಪ್ರಕಾಶ ವಾಲಿ, ಮಲೀಕಸಾಬ ಬಾಗವಾನ, ಡಿ.ಕೆ.ರಫೀಕ್, ಪೈಗಂಬರ ನದ್ಾ, ಗೌಡಪ್ಪ ಉದಪುಡಿ, ಯಲ್ಲಪ್ಪಗೌಡ ಪಾಟೀಲ, ಾರೂಕ್ ಅತ್ತಾರ, ಮುಖ್ಯಶಿಕ ಎನ್.ಎಸ್.ಕಾಂಬಳೆ ಇತರರಿದ್ದರು.